ಕರ್ನಾಟಕ

karnataka

ಚನ್ನಗಿರಿ: ಬೈಕ್‌ನಲ್ಲಿ ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

By

Published : Oct 28, 2021, 6:36 AM IST

ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ವ್ಯಕ್ತಿಯೋರ್ವ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

davangere
ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ದಾವಣಗೆರೆ: ವ್ಯಕ್ತಿಯೋರ್ವ ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಚನ್ನಗಿರಿ ತಾಲೂಕಿನ ಚಿರಡೋಣಿ ಹಾಗೂ ದೊಡ್ಡಗಟ್ಟ ಮಧ್ಯಭಾಗ ಹರಿಯುವ ಹಳ್ಳದಲ್ಲಿ ಘಟನೆ ಜರುಗಿದೆ.

ಕುಳಗಟ್ಟ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಸಿ. ಶಿವರಾಜ್ (26) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸೂಳೆಕೆರೆ ಕೋಡಿ ಬಿದ್ದಿದ್ದು ಚಿರಡೋಣಿ ಹಾಗು ದೊಡ್ಡಗಟ್ಟದ ಹಳ್ಳ ತುಂಬಿ ಹರಿಯುತ್ತಿದೆ.

ಚಿರಡೋಣಿ ಹಾಗೂ ದೊಡ್ಡಗಟ್ಟ ಮಧ್ಯ ಭಾಗದಲ್ಲಿ ಹರಿಯುತ್ತಿರುವ ಹಳ್ಳ

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶಿವರಾಜ್​ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಳ್ಳದ ಕಡೆ ಹೋಗುವ ವಾಹನ ಸವಾರರನ್ನು ತಡೆದು ಬೇರೆ ರಸ್ತೆ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

ABOUT THE AUTHOR

...view details