ಕರ್ನಾಟಕ

karnataka

ಸತತ ಮೂರು ಗಂಟೆ ಕಾಲ ಐಟಿ ವಿಚಾರಣೆ ಎದುರಿಸಿದ ಬಳಿಕ ಪರಮೇಶ್ವರ್​ ಹೇಳಿದ್ದೇನು?

By

Published : Oct 21, 2019, 3:18 PM IST

ತಮ್ಮ ಮನೆ ಹಾಗೂ ಶಿಕ್ಷಣ ಸಂಸ್ಥೆ ಮೇಲೆ ನಡೆದಿದ್ದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ನೀಡಿದ ಸಮನ್ಸ್ ಹಿನ್ನೆಲೆ ಮಾಜಿ ಡಿಸಿಎಂ ಪರಮೇಶ್ವರ್ ಇಂದು ಕ್ವೀನ್ಸ್ ರಸ್ತೆಯ ಬಳಿ ಇರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಪರಮೇಶ್ವರ್

ಬೆಂಗಳೂರು:ತಮ್ಮ ಮನೆ ಹಾಗೂ ಶಿಕ್ಷಣ ಸಂಸ್ಥೆ ಮೇಲೆ ನಡೆದಿದ್ದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ನೀಡಿದ ಸಮನ್ಸ್ ಹಿನ್ನೆಲೆ ಮಾಜಿ ಡಿಸಿಎಂ ಪರಮೇಶ್ವರ್ ಇಂದು ಕ್ವೀನ್ಸ್ ರಸ್ತೆಯ ಬಳಿ ಇರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ತನಿಖೆ ಎದುರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪರಮೇಶ್ವರ್

ಸತತ ಮೂರು ಗಂಟೆಗಳ ಕಾಲ ಐಟಿ ಅಧಿಕಾರಿಗಳ ತನಿಖೆ ಎದುರಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಕೇಳಿದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದೇನೆ. ಇವತ್ತು ಅಧಿಕಾರಿಗಳು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು. ಅದಕ್ಕೆ ಬಂದಿದ್ದೆ. ಐಟಿ ಅಧಿಕಾರಿಗಳು ಕೆಲ ಪ್ರಶ್ನೆಗಳನ್ನ ಕೇಳಿದ್ರು. ಅದಕ್ಕೆ ದಾಖಲೆ ಸಮೇತ ಉತ್ತರ ಕೊಟ್ಟಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದರು.

ಇನ್ನು ಐಟಿ ಅಧಿಕಾರಿಗಳು ಯಾವ ಪ್ರಶ್ನೆ ಕೇಳಿದ್ರು ಅಂತಾ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಹಾಗೆಯೇ ನನ್ನ ಅಣ್ಣ, ಮಗನ ಆಪ್ತರ ಮನೆ ಮೇಲೆಯೂ ಸಹ ದಾಳಿ ನಡೆದಿದ್ದು, ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರೆ ಎಂದರು.

Intro:ಐಟಿ ಕಚೇರಿಯಲ್ಲಿ ಪರಮೇಶ್ವರ್ ವಿಚಾರಣೆ ಮುಕ್ತಾಯ mojo ,byite ಬರ್ತಿದೆ

ಮಾಜಿ ಡಿಸಿಎಂ ಪರಂಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ ಕಾರಣ ಪರಮೇಶ್ವರ್ ಅವರು‌ ಕ್ವೀನ್ಸ್ ರಸ್ತೆಯ ಬಳಿ ಇರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಸತತ ಮೂರು ಗಂಟೆಗಳ ಕಾಲ ಐಟಿ ಅಧಿಕಾರಿಗಳ ತನಿಖೆ ಎದುರಿಸಿದ ಪರಮೇಶ್ವರ್ ನಂತ್ರ ಮಾಧ್ಯಮ ಎದುರು ಮಾತನಾಡಿದ ಮಾಜಿ ಡಿಸಿಎಂ ಐಟಿ ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆ , ಮತ್ತು ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದೆನೆ ಇವತ್ತು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರುಅದಕ್ಕೆ ಬಂದಿದೆ. ಐಟಿ ಅಧಿಕಾರಿಗಳು ಕೆಲ ಪ್ರಶ್ನೆಗಳನ್ನ ಕೇಳಿದ್ರು ಅದಕ್ಕೆ ದಾಖಲೆ ಸಮೇತ ಉತ್ತರ ಕೊಟ್ಟಿದ್ದೆನೆ.

ಮತ್ತೆ ವಿಚಾರಣೆಗೆ ಕರೆದ್ರೆ ಹಾಜರಾಗುತ್ತೆನೆ ,ಐಟಿ ಅಧಿಕಾರಿಗಳು ಯಾವ ಪ್ರಶ್ನೆ ಕೇಳಿದ್ರು ಅಂತ ಬಹಿರಂಗವಾಗಿ ಹೇಳಕ್ಕೆ ಆಗಲ್ಲ. ನಮ್ಮ ಅಡಿಟೇರ್ ಗಳನ್ನ ಬರಲು ಸೂಚಿಸಿದ್ದಾರೆ‌ಅವರು ಬಂದು ಮುಂದೆ ದಾಖಲೆಗಳ ಸಮೇತ ಉತ್ತರ ಕೊಡ್ತಾರೆ. ಹಾಗೆ ನನ್ನ ಅಣ್ಣಾ ಮಗ ಆಪ್ತರ ಮನೆ ಮೇಲೆ ದಾಳಿ ನಡೆದಿದ್ದು ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರೆ ಎಂದ್ರು.

ಇನ್ನು ದೆಹಲಿ ಶಿವಕುಮಾರ್ ನಿವಾಸದ ಮೇಲೆ CBI ದಾಳಿ ವಿಚಾರ ಕೇಳಿದಾಗ ಆ ವಿಚಾರ ನನಗೆ ಗೊತ್ತಿಲ್ಲ ಎಂದು‌ ವಿಚಾರಣೆ ಬಳಿಕ ಐಟಿ ಕಚೇರಿಯಿಂದ ಖಾಸಗಿ ಕಾರಿನಲ್ಲಿ ಡಾ.ಜಿ ಪರಮೇಶ್ವರ್ ತೆರಳಿದ್ದಾರೆ.


Body:KN_BNG_05_PArMesWR_7204498Conclusion:KN_BNG_05_PArMesWR_7204498

ABOUT THE AUTHOR

...view details