ಕರ್ನಾಟಕ

karnataka

ನಾರಾಯಣ ಹೃದಯಾಲಯದ 100 ಕೋವಿಡ್ ಹಾಸಿಗೆಗಳಿಗೆ ಸೌರವ್ ಗಂಗೂಲಿ ಚಾಲನೆ

By

Published : Feb 14, 2022, 2:18 PM IST

ಸೋಮವಾರ ಬೆಳಗ್ಗೆ ನಾರಾಯಣ ಹೃದಯಾಲಯದ ಆರನೇ ಮಹಡಿಯಲ್ಲಿ ಸಿದ್ಧಪಡಿಸಿರುವ 100 ಕೋವಿಡ್ ಹಾಸಿಗೆಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಚಾಲನೆ ನೀಡಿದರು..

Sourav Ganguly
100 ಕೋವಿಡ್ ಹಾಸಿಗೆಗಳಿಗೆ ಚಾಲನೆ ನೀಡಿದ ಸೌರವ್ ಗಂಗೂಲಿ

ಆನೇಕಲ್: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ ನಾರಾಯಣ ಹೃದಯಾಲಯ ಕಟ್ಟಡದ ಆರನೇ ಮಹಡಿಯಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧಗೊಂಡಿರುವ ನೂರು ಹಾಸಿಗೆಗಳ ಸೇವೆಗೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸೌರವ್ ಗಂಗೂಲಿ, ಮೂರು ದಿನಗಳ ಹಿಂದೆ ನಾರಾಯಣ ಹೆಲ್ತ್ ಸಿಟಿಗೆ ಬಂದು ನೋಡಿದ್ದೇನೆ. ಇಲ್ಲಿನ ವ್ಯವಸ್ಥೆ, ಸೋಂಕಿತರನ್ನ ಆರೈಕೆ ಮಾಡುವ ಪರಿಣಿತಿಗೆ ಸೋತಿದ್ದೇನೆ.

ಕೊರೊನಾದಿಂದ ಜನರು ಅನೇಕ ಸಂಕಷ್ಟಗಳನ್ನ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಇಂತಹ ಸೇವೆ ಒದಗಿಸಿರುವುದರ ಕುರಿತು ಮಾತನಾಡಲು ಪದಗಳೇ ಬರುತ್ತಿಲ್ಲವೆಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

100 ಕೋವಿಡ್ ಹಾಸಿಗೆಗಳಿಗೆ ಚಾಲನೆ ನೀಡಿದ ಸೌರವ್ ಗಂಗೂಲಿ

ಕೋವಿಡ್​ ಮೂರನೇ ಅಲೆಗೆ ನಾವು ಬಂದು ನಿಂತಿದ್ದೇವೆ. ಆದರೆ, ಇಷ್ಟಕ್ಕೇ ಕೋವಿಡ್ ನಿಂತಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೋಂಕು ಕಾಣಿಸಬಹುದು. ಅದಕ್ಕಾಗಿ ಜನರು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್​ ಬಳಸಬೇಕು ಎಂದು ಹೃದಯತಜ್ಞ ದೇವಿಶೆಟ್ಟಿ ತಿಳಿಸಿದರು.

ABOUT THE AUTHOR

...view details