ಕರ್ನಾಟಕ

karnataka

ಇನ್ಸ್​ಟಾದಲ್ಲಿ ಮುಖ ಮರೆಮಾಚಿದ ಸೆಲ್ಫಿ ಹಾಕಿರುವ ಸ್ಯಾಂಡಲ್​ವುಡ್ ಕ್ವೀನ್ ​: ಅತ್ಯಾಚಾರದ ವಿರುದ್ಧ ಕಿಡಿ

By

Published : Aug 27, 2021, 2:41 PM IST

ಪುರುಷರು ಪುರುಷರೇ.. ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಸರಿ ಹೊಂದಿಸಬೇಕು, ನಾವು ಸಹಿಸಿಕೊಳ್ಳಬೇಕು ಎಂದು ರಮ್ಯಾ ಕಿಡಿಕಾರಿದ್ದಾರೆ. ಇನ್ನು, ಸಹಿಸಲು ಸಾಧ್ಯವಿಲ್ಲ. ಪೂರ್ಣ ವಿರಾಮ ಇಡುವುದು ನಾಚಿಕೆಗೇಡು..

Sandalwood  Queen Ramya Insta post
ಇನ್ಸ್​ಟಾದಲ್ಲಿ ಮುಖ ಮರೆಮಾಚಿದ ಸೆಲ್ಫಿ ಹಂಚಿಕೊಂಡಿರುವ ಸ್ಯಾಂಡಲ್​ವುಡ್ ಕ್ವೀನ್​: ಅತ್ಯಾಚಾರದ ವಿರುದ್ಧ ಕಿಡಿ

ಬೆಂಗಳೂರು :ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ಕಿಡಿಕಾರಿದ್ದಾರೆ. ಇನ್ಸ್​​ಟಾಗ್ರಾಮ್​ನಲ್ಲಿ ಮುಖ ಮರೆಮಾಚಿರುವ ಸೆಲ್ಫಿ ಹಂಚಿಕೊಂಡಿರುವ ಅವರು, ಪುರುಷರು ಮಹಿಳೆಯರ ಮೇಲೆ ನಡೆಸುವ ಎಲ್ಲಾ ದೌರ್ಜನ್ಯಗಳಿಗೂ ಮಹಿಳೆಯನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮಹಿಳೆಯ ಮೇಲೆ ಪುರುಷಅತ್ಯಾಚಾರ ಎಸಗಿರಬಹುದು ಅಥವಾ ದೈಹಿಕವಾಗಿ ಹಲ್ಲೆ ಮಾಡಿರಬಹುದು ಅಥವಾ ನಿಂದಿಸಿರಬಹುದು. ಆದರೆ, ಈ ವೇಳೆ ಅದು ನಿನ್ನ ತಪ್ಪು, ನೀನು ಆ ರೀತಿ ಹೇಳಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು. ನೀನು ಆ ರೀತಿಯ ಬಟ್ಟೆ ಹಾಕಬಾರದಿತ್ತು, ನಿನ್ನ ಬಟ್ಟೆ ತುಂಬಾ ಚಿಕ್ಕದಾಯ್ತು, ನಿನ್ನ ಬಟ್ಟೆ ತುಂಬಾ ಉದ್ದ ಆಯ್ತು, ತಡ ರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಮೇಕಪ್ ಮಾಡಿಕೊಳ್ಳಬಾರದಾಗಿತ್ತು, ಕೆಂಪು ಲಿಪ್​ಸ್ಟಿಕ್ ಯಾಕೆ ಹಾಕಬೇಕು?ಇದು ಬೇಡ, ಅದು ಬೇಡ ಎಂಬ ಪ್ರಶ್ನೆಗಳು ಎದುರಾಗುತ್ತವೆ.'

ಯಾಕೆಂದರೆ, ಪುರುಷರು ಪುರುಷರೇ.. ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಸರಿ ಹೊಂದಿಸಬೇಕು, ನಾವು ಸಹಿಸಿಕೊಳ್ಳಬೇಕು ಎಂದು ರಮ್ಯಾ ಕಿಡಿಕಾರಿದ್ದಾರೆ. ಇನ್ನು, ಸಹಿಸಲು ಸಾಧ್ಯವಿಲ್ಲ. ಪೂರ್ಣ ವಿರಾಮ ಇಡುವುದು ನಾಚಿಕೆಗೇಡು ಎಂದು ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಪೊಲೀಸ್ ಅಕಾಡೆಮಿಯಲ್ಲಿ ಗನ್‌ ಹಿಡಿದು ಶೂಟ್‌ ಟ್ರಯಲ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details