ಕರ್ನಾಟಕ

karnataka

ದೇಶದೆಲ್ಲೆಡೆ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

By

Published : May 23, 2022, 10:55 AM IST

ಏರುತ್ತಲೇ ಸಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರಕ್ಕೆ ಸದ್ಯ ಕೊಂಚ ಕಡಿವಾಣ ಬಿದ್ದಿದೆ. ದೇಶ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತೈಲ ಬೆಲೆ ಹೀಗಿದೆ..

Petrol and Diesel Prices Today, Fuel prices remained unchanged on Monday, Petrol and Diesel Prices Karnataka statewide today, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು, ಸೋಮವಾರ ಇಂಧನ ಬೆಲೆಗಳು ಯಥಾಸ್ಥಿತಿ, ಇಂದು ಕರ್ನಾಟಕ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ,
ಕರ್ನಾಟಕ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ

ನವದೆಹಲಿ/ಬೆಂಗಳೂರು: ಸೋಮವಾರ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸಿ ಘೋಷಣೆ ಮಾಡಿದ್ದರು.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ ಈಗ 89.62 ಆಗಿದೆ. ಮಹಾರಾಷ್ಟ್ರ ಸರ್ಕಾರವು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 2.08 ರೂ ಕಡಿತಗೊಳಿಸಲಾಗಿದೆ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 1.44 ರೂ ಇಳಿಕೆಯಾಗಿದೆ. ಹಾಗಾಗಿ, ಮುಂಬೈನಲ್ಲಿ ಇತ್ತೀಚಿನ ಅಬಕಾರಿ ಸುಂಕ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ 97.28 ರೂ. ಇದೆ.

ಇದನ್ನೂ ಓದಿ:ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 92.76 ರೂ ಆಗಿದೆ. ಚೆನ್ನೈನಲ್ಲಿ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 102.63 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 84.26 ರೂ. ಆಗಿದೆ.

ಇನ್ನು ರಾಜ್ಯದ ವಿಷಯಕ್ಕೆ ಬಂದ್ರೆ, ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್​ ಲೀಟರ್​ಗೆ 101.96 ರೂ. ಮಾರಾಟವಾದ್ರೆ, ಡೀಸೆಲ್ ದರ 87.91ರೂ.ಗೆ ಮಾರಾಟವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 101.65 ರೂಪಾಯಿ ಮತ್ತು ಡೀಸೆಲ್​ ದರ ಒಂದು ಲೀಟರ್​ಗೆ 87.65 ರೂಪಾಯಿ ಇದೆ.

ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 101.44 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 87.43 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 103.39 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 89.12 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 103.95 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 89.52 ರೂಪಾಯಿ ಇದೆ.

ABOUT THE AUTHOR

...view details