ಕರ್ನಾಟಕ

karnataka

'ಪುನೀತ್‌ ನನ್ನ ಮಾಮ.. ಮಾಮ.. ಅಂತಿದ್ದ' : ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವುಕ

By

Published : Oct 30, 2021, 12:48 PM IST

Updated : Oct 30, 2021, 12:59 PM IST

ಪುನೀತ್‌ ರಾಜ್‌ಕುಮಾರ್‌ ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಪ್ರೀತಿಯಿಂದ ಕರೆಯುತ್ತಿದ್ದ ಎಂದು ಅಪ್ಪು ಅವರೊಂದಿ ಇದ್ದ ಒಡನಾಟವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

Opposition Leader Siddaramaiah Reaction on Puneeth Rajkumar death in Bangalore
'ಪುನೀತ್‌ ನನ್ನ ಮಾಮ.. ಮಾಮ.. ಅಂತಿದ್ದ' - ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಪುನೀತ್‌ ಒಬ್ಬ ಪ್ರತಿಭಾವಂತ ನಟ, ಇನ್ನೂ ಬಹಳ ವರ್ಷ ನಮ್ಮ ಜೊತೆ ಇರಬೇಕಾಗಿತ್ತು. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಇಡೀ ದೇಶದ ಚಿತ್ರರಂಗಕ್ಕೆ ನಷ್ಟವಾಗಿದೆ. ಆ ನಷ್ಟ ತುಂಬುವುದು ಬಾರಿ ಕಷ್ಟ. ನಿನ್ನೆ, ಇವತ್ತು ಕರ್ನಾಟಕದ ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ನಿಧನದಿಂದ ವಿಶೇಷವಾಗಿ ಯುವಕರು ದಿಗ್ಬ್ರಾಂತರಾಗಿದ್ದಾರೆ. ಪುನೀತ್‌ಗೆ ಚಿರಶಾಂತಿ ದೊರಕಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಕರೆಯುತ್ತಿದ್ದ ಎಂದು ಅಪ್ಪು ಅವರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು.

20 ದಿನಗಳ ಹಿಂದೆ ಸಲಗ ಚಿತ್ರದ ಫ್ರೀ ರಿಲೀಸ್‌ಗೆ ಹೋಗಿದ್ದಾಗ ಅಲ್ಲಿ ಪುನೀತ್‌, ಶಿವರಾಜ್‌ಕುಮಾರ್‌ ಇಬ್ಬರೂ ಸಿಕ್ಕಿದ್ರು. ಹೀಗೆ ಹೃದಯಾಘಾತ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಿತ್ಯ ಜಿಮ್‌ಗೆ ಹೋಗೋದು, ವಾಕ್‌ ಮಾಡೋದು ಇದೆಲ್ಲಾ ಇತ್ತು. ಬಹಳ ಫಿಟ್ ಆಗಿದ್ರು. ಇದೆಲ್ಲಾಕ್ಕಿಂತ ಒಳ್ಳೆ ಡ್ಯಾನ್ಸರ್‌. ಇಂತಹ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ. ಸಾವು ಬರುತ್ತದೆ. ಆದ್ರೆ ಇಷ್ಟು ಚಿಕ್ಕ ವಯಸ್ಸಿಗೆ ಬರಬಾರದಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:ಇಂದೇ 'ಅಪ್ಪು' ಅಂತ್ಯಸಂಸ್ಕಾರ: ಸಚಿವ ಅಶ್ವತ್ಥ್​ ನಾರಾಯಣ್​

Last Updated : Oct 30, 2021, 12:59 PM IST

ABOUT THE AUTHOR

...view details