ಕರ್ನಾಟಕ

karnataka

Covid 3ನೇ ಅಲೆ ತಡೆಗೆ ತಾಂತ್ರಿಕ ಸಲಹಾ ಸಮಿತಿಯಿಂದ ಹೊಸ ಶಿಫಾರಸು: ಆ.​​16ರ ವರೆಗೆ ನಿರ್ಬಂಧ

By

Published : Aug 2, 2021, 5:29 PM IST

ಕೊರೊನಾ 3ನೇ ಅಲೆ ತಡೆಗೆ ತಾಂತ್ರಿಕ ಸಲಹಾ ಸಮಿತಿ ಹೊಸ ಶಿಫಾರಸು ಮಾಡಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದೆ.‌ ಜತೆಗೆ ಆಗಸ್ಟ್ 2 ರಿಂದ 16ರ ವರೆಗೆ ಕೆಲ ನಿರ್ಬಂಧವನ್ನ‌ ವಿಧಿಸುವಂತೆ ಸಲಹೆ ನೀಡಿದೆ.

Covid
ಕೊರೊನಾ

ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇದೀಗ ಕರ್ನಾಟಕದಲ್ಲಿಯೂ ಆತಂಕ ಮೂಡಿಸಿದೆ‌‌. ಕೇರಳ, ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿಧಾನವಾಗಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪಾಸಿಟಿವಿಟಿ ದರ

ಕೇರಳ - ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್​​ಟಿಪಿಸಿಆರ್ ಟೆಸ್ಟ್ ಮಾಡುವುದು, ಲಸಿಕೆ ಪಡೆದಿದ್ದರೂ 72 ಗಂಟೆಗಳ ಕೊರೊನಾ ನೆಗೆಟಿವ್ ರಿಪೋರ್ಟ್ ತರಲೇಬೇಕು. ಈ ಬಗ್ಗೆ ಜು.30 ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯ 117ನೇ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ.

ಇದೇ ಸಭೆಯಲ್ಲಿ ಹೊಸ ಶಿಫಾರಸು ಮಾಡಿದ್ದು, ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದೆ.‌ ಆಗಸ್ಟ್ 2 ರಿಂದ 16ರ ವರೆಗೆ ಕೆಲ ನಿರ್ಬಂಧವನ್ನ‌ ವಿಧಿಸುವಂತೆ ಸಲಹೆಯನ್ನ ನೀಡಿದೆ. ಕೇರಳ ಮಹಾರಾಷ್ಟ್ರ ದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಉಲ್ಬಣಗೊಳ್ಳುತ್ತಿದ್ದು, ಇದು ಕರ್ನಾಟಕಕ್ಕೂ ಮತ್ತೆ ಮಾರಕವಾಗಬಹುದು. ಹೀಗಾಗಿ, ಹಲವು ಸಲಹೆಗಳನ್ನ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ನೀಡಿದೆ.‌

ತಾಂತ್ರಿಕ‌ ಸಲಹಾ ಸಮಿತಿಯ ಶಿಫಾರಸುಗಳೇನು?

  1. ವಾಣಿಜ್ಯ ಚಟುವಟಿಕೆಗಳಿಗೆ ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಮಾತ್ರ ಅವಕಾಶ ಕೊಡಬೇಕು.
  2. ನೈಟ್ ಕರ್ಫ್ಯೂ ಸಂಜೆ 7 ರಿಂದ ಬೆಳಗ್ಗೆ 6 ತನಕ ವಿಧಿಸಬೇಕು.
  3. ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 6 ತನಕ ವಿಧಿಸಬೇಕು.
  4. ಎಲ್ಲ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳಿಗೆ ಕಚೇರಿ ಕೆಲಸ, ಉಳಿದವರಿಗೆ ವರ್ಕ್ ಫಾರ್ಮ್ ಹೋಂಗೆ ಪ್ರೋತ್ಸಾಹಿಸುವುದು.
  5. ಕೋವಿಡ್ ಮಾರ್ಗಸೂಚಿಯನ್ನ ಕಡ್ಡಾಯವಾಗಿ ಪಾಲಿಸುವಂತೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು.

ಶಾಲಾರಂಭ ವಿಚಾರ ಪ್ರತ್ಯೇಕವಾಗಿ ಚರ್ಚಿಸುವುದು ಸೂಕ್ತ:

ರಾಜ್ಯದಲ್ಲಿ ಈಗಾಗಲೇ ಶಾಲಾರಂಭಕ್ಕೆ ಒತ್ತಾಯ ಕೇಳಿ ಬಂದಿದೆ‌. ಕೇರಳ, ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ, ರಾಜ್ಯದಲ್ಲಿ ಶಾಲೆ ತೆರೆಯುವ ಬಗ್ಗೆ ಪ್ರತ್ಯೇಕವಾಗಿ ನಿರ್ಧರಿಸುವುದು ಉತ್ತಮ ಎಂಬ ಶಿಫಾರಸು ನೀಡಿದ್ದಾರೆ.‌

ಪಾಸಿಟಿವಿಟಿ ಶೇ. 2ಕ್ಕಿಂತ ಹೆಚ್ಚಿರುವ ಜಿಲ್ಲೆಗಳು:

ಜಿಲ್ಲೆಗಳು- ಪಾಸಿಟಿವಿಟಿ ದರ

  • ದಕ್ಷಿಣ ಕನ್ನಡ- 5.64
  • ಚಿಕ್ಕಮಗಳೂರು- 4.82
  • ಕೊಡಗು - 4.69
  • ಉಡುಪಿ-4.27
  • ಹಾಸನ- 2.66
  • ಶಿವಮೊಗ್ಗ- 2.32
  • ಚಾಮರಾಜನಗರ- 2.15
  • ಮೈಸೂರು- 2.04

ಇದನ್ನೂ ಓದಿ:RTPCR ಇಲ್ಲದ ಮಹಾರಾಷ್ಟ್ರ, ಕೇರಳ ಪ್ರಯಾಣಿಕರಿಗೆ ಕ್ವಾರಂಟೈನ್​​ ಕಡ್ಡಾಯ: ಗೌರವ್ ಗುಪ್ತ

ABOUT THE AUTHOR

...view details