ಕರ್ನಾಟಕ

karnataka

ಕೃಷಿಯಲ್ಲಿ ಖುಷಿ ಸಿಗಬೇಕಾದರೆ ನೈಸರ್ಗಿಕ ಬೇಸಾಯ ಮಾಡಬೇಕು; ರವಿಶಂಕರ್ ಗುರೂಜಿ

By

Published : Feb 8, 2021, 7:12 PM IST

ಭಾರತೀಯರಾದ ನಾವು ನಮ್ಮದೇ ಆದ ಸಾವಯವ ಕೃಷಿ, ನೈಸರ್ಗಿಕ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದ್ದೇವೆ. ವಿದೇಶಿ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದೇವೆ. ಇದರಿಂದ ನಮಗೆ ಅರಿವಿಲ್ಲದೆ, ರೋಗರುಜಿನಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ನೈಸರ್ಗಿಕ ಕೃಷಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಟ್​​​ ಆಫ್​ ಲಿವಿಂಗ್​​​ ಸಂಸ್ಥಾಪಕ ಡಾ.ರವಿಶಂಕರ್​ ಗುರೂಜಿ ಸಲಹೆ ನೀಡಿದರು.

natural-farming-must-be-done-in-india
ರವಿಶಂಕರ್ ಗುರೂಜಿ

ಬೆಂಗಳೂರು : ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ-2021ಕ್ಕೆ ಆರ್ಟ್​​​ ಆಫ್​ ಲಿವಿಂಗ್​​​ ಸಂಸ್ಥಾಪಕ ಡಾ. ರವಿಶಂಕರ್​ ಗುರೂಜಿ ಚಾಲನೆ ನೀಡಿ, ಕೃಷಿ ಚೆನ್ನಾಗಿದ್ದರೆ ರೈತರು ಖುಷಿಯಾಗಿರುತ್ತಾರೆ. ರೈತರ ಮೊಗದಲ್ಲಿ ನಗೆ ಮೂಡಬೇಕಾದರೆ, ನೈಸರ್ಗಿಕ ಕೃಷಿ ಪದ್ದತಿ ಅಳವಡಿಕೆ ಅಗತ್ಯವಿದೆ ಎಂದರು.

ನಗರದ ಹೊರವಲಯದ ಹೆಸರಘಟ್ವದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಇಂದಿನಿಂದ ಆರಂಭಗೊಂಡಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಉದ್ಘಾಟಿಸಿ ಅವರು ಮಾತನಾಡಿದ ಅವರು, ನಾವಿಂದು ವಿಷಪೂರಿತ ರಾಸಾಯನಿಕ ಕೃಷಿ ಮಾಡುತ್ತಿದ್ದೇವೆ. ಈ ಪದ್ಧತಿ ಬದಲಾಗಬೇಕು. ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ, ಭೋಜನಾ ವ್ಯವಸ್ಥೆ ಕೂಡ ಬದಲಾಗಬೇಕಿದೆ. ಕೆಲ ಪ್ರದೇಶಗಳಲ್ಲಿ ಜನರು ಅಪೌಷ್ಟಿಕತೆಯಿಂದ ಇಂದಿಗೂ ಬಳಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ. ಅಪೌಷ್ಟಿಕತೆ ದೂರ ಮಾಡಲು ಪ್ರತಿಯೊಬ್ಬ ರೈತರು ಜಮೀನುಗಳಲ್ಲಿ ಹಣ್ಣು-ಹಂಪಲುಗಳ ಗಿಡಮರಗಳನ್ನು ನೆಡಬೇಕು. ಈ ಮೂಲಕ ನೈಸರ್ಗಿಕ ಕೃಷಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿಯಲ್ಲಿ ಖುಷಿ ಸಿಗಬೇಕಾದರೆ ನೈಸರ್ಗಿಕ ಬೇಸಾಯ ಮಾಡಬೇಕು

ಸಾವಯವ ಕೃಷಿಗೆ ಮುಂದಾಗಬೇಕು

ಭಾರತೀಯರಾದ ನಾವು ನಮ್ಮದೇ ಆದ ಸಾವಯವ ಕೃಷಿ, ನೈಸರ್ಗಿಕ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದ್ದೇವೆ. ವಿದೇಶಿ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದೇವೆ. ಇದರಿಂದ ನಮಗೆ ಅರಿವಿಲ್ಲದೆ, ರೋಗರುಜಿನಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿ ಅಗ್ಗದ ದರದಲ್ಲಿ ದೊರೆಯುವ ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪೌಷ್ಠಿಕಾಂಶ ಇದೆ. ಆದರೆ, ನಾವು ಅದನ್ನು ಸೇವಿಸುವುದು ಬಹಳಷ್ಟು ಕಡಿಮೆ. ಆದರೆ, ಅಮೆರಿಕಾದಲ್ಲಿ ನಮ್ಮ ನುಗ್ಗೆಸೊಪ್ಪುನ್ನು ಪುಡಿ ಮಾಡಿ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ರೈತರು ನಮ್ಮ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಮಾತನಾಡಿ, ಕಳೆದ ಐದು ದಶಕಗಳಿಂದ ಸಾಕಷ್ಟು ತಳಿ ಮತ್ತು ತಂತ್ರಜ್ಞಾನವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. 300ಕ್ಕೂ ಹೆಚ್ಚು ತಂತ್ರಜ್ಞಾನವನ್ನು ಆವಿಷ್ಕರಿಸಿದೆ. 50ಸಾವಿರಕ್ಕೂ ಅಧಿಕ ರೈತರು ವಿವಿಧ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಬೇಸಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಪೋಟಿ ನಡೆಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತನ್ನನ್ನು ತಾನು ಸಜ್ಜುಗೊಳಿಸಿದೆ. ಆನ್ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಮತ್ತು ಹೂಗಳ ಬೀಜಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ABOUT THE AUTHOR

...view details