ಕರ್ನಾಟಕ

karnataka

ಮಾಲ್​ನಲ್ಲಿ ಸಿಕ್ಕ ಚಿನ್ನದ ಸರ ಹಿಂದಿರುಗಿಸಿದ‌ ಸಚಿವರ ಗನ್ ಮ್ಯಾನ್.. ಮಹಿಳೆಯಿಂದ ಕೃತಜ್ಞತಾ ಪತ್ರ

By

Published : Jul 12, 2022, 4:04 PM IST

ಮಾಲ್​ನಲ್ಲಿ ಸಿಕ್ಕ ಚಿನ್ನದ ಸರ ವಾರಸುದಾರರ ಕೈಗೆ- ಪ್ರಾಮಾಣಿಕತೆ ಮೆರೆದ ಸಚಿವರ ಗನ್​ಮ್ಯಾನ್ - ಮಹಿಳೆಯಿಂದ ಕೃತಜ್ಞತಾ ಪತ್ರ

gun man
ಸಚಿವರ ಗನ್ ಮ್ಯಾನ್

ಬೆಂಗಳೂರು :ಮಾಲ್​ನಲ್ಲಿ ಸಿಕ್ಕ ಚಿನ್ನದ ಸರವನ್ನು ಮಹಿಳೆಗೆ ನೀಡಿ ಸಚಿವರ ಗನ್ ಮ್ಯಾನ್ ಪ್ರಾಮಾಣಿಕತೆ ಮೆರೆದಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರ ಗನ್ ಮ್ಯಾನ್ ಆಗಿರುವ ಸಿಎಆರ್ ಕಾನ್​ಸ್ಟೇಬಲ್ ಅಂಜನ್ ಕುಮಾರ್ ಜಿ ಟಿ ಅವರು ತಮಗೆ ಮಾಲ್​ನಲ್ಲಿ ಸಿಕ್ಕ ಸರವನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ.

ಮಾಲ್​ನಲ್ಲಿ ಶಾಪಿಂಗ್ ಹೋದಾಗ ಗನ್ ಮ್ಯಾನ್ ಅಂಜನ್​ ಅವರಿಗೆ ಈ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ದರು. ಈ ವೇಳೆ ಮಹಿಳೆಯನ್ನು ಶಾಪ್​ಗೆ ಕರೆಸುವಂತೆ ಹೇಳಿ ಶಾಪ್​ನಲ್ಲೇ ಅವರಿಗೆ ಸರವನ್ನು ಹಿಂದಿರುಗಿಸಿದ್ದಾರೆ.

ಚಿನ್ನದ ಸರ ಪಡೆದ ಮಹಿಳೆಯು ಕಾನ್ಸ್ ಟೇಬಲ್ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್​ಗೆ ಪತ್ರ ಬರೆದಿದ್ದಾರೆ. ಪೊಲೀಸ್ ಇಲಾಖೆಗೆ ಹಾಗೂ ಗನ್ ಮ್ಯಾನ್​ಗೆ ಧನ್ಯವಾದ ತಿಳಿಸಿ ಅಶ್ವಿನಿ ಎನ್ನುವವರು ಪತ್ರ ಬರೆದಿದ್ದಾರೆ. ಗನ್ ಮ್ಯಾನ್ ಅಂಜನ್ ಕಳೆದ ಏಳು ವರ್ಷಗಳಿಂದ ಸಚಿವ ಸುಧಾಕರ್ ಅವರಿ​ಗೆ ಗನ್ ಮ್ಯಾನ್ ಆಗಿದ್ದಾರೆ.

ಇದನ್ನೂ ಓದಿ:ಜಲಾವೃತಗೊಂಡ ಬೀಸನಗದ್ದೆ ಗ್ರಾಮಕ್ಕೆ ತೆಪ್ಪದಲ್ಲಿ ತೆರಳಿ ಆಹಾರ ಪೊಟ್ಡಣ ವಿತರಿಸಿದ ತಹಶೀಲ್ದಾರ್

ABOUT THE AUTHOR

...view details