ಕರ್ನಾಟಕ

karnataka

ಗೋಮಾಳ ಜಮೀನು ನೀತಿ ಉಪಸಮಿತಿಗೆ ಅಧ್ಯಕ್ಷರಾಗಿ ಸಚಿವ ಆರ್.ಅಶೋಕ್ ನೇಮಕ

By

Published : Jan 29, 2022, 10:19 PM IST

ಉಪಸಮಿತಿ ರಚಿಸುವ ಸಂಬಂಧ ಜನವರಿ 6 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಈ ಕೆಳಕಂಡಂತೆ ಸಚಿವ ಸಂಪುಟದ ಒಂದು ಉಪಸಮಿತಿಯನ್ನು ರಚಿಸಲಾಗಿದೆ.

minister r-ashok
ಸಚಿವ ಆರ್.ಅಶೋಕ್

ಬೆಂಗಳೂರು:ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ನೀತಿಯನ್ನು ರೂಪಿಸಲು ಉಪಸಮಿತಿಯನ್ನು ರಚಿಸಲಾಗಿದೆ.

ಉಪಸಮಿತಿ ರಚಿಸುವ ಸಂಬಂಧ ಜನವರಿ 6 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಈ ಕೆಳಕಂಡಂತೆ ಸಚಿವ ಸಂಪುಟದ ಒಂದು ಉಪಸಮಿತಿಯನ್ನು ರಚಿಸಲಾಗಿದೆ.

ಗೋಮಾಳ ಜಮೀನು ನೀತಿ ಉಪಸಮಿತಿಗೆ ಅಧ್ಯಕ್ಷರಾಗಿ ಸಚಿವ ಆರ್.ಅಶೋಕ್ ನೇಮಕ

ಕಂದಾಯ ಸಚಿವ ಆರ್. ಆಶೋಕ್ ಅವರನ್ನು ಉಪಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಐವರು ಸಚಿವರು ಸಮಿತಿಯ ಸದಸ್ಯರಾಗಿದ್ದಾರೆ.

ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್, ಕೃಷಿ ಸಚಿವ ಬಿ.ಸಿ. ಪಾಟೀಲ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಸಮಿತಿಯ ಸದಸ್ಯರಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details