ಕರ್ನಾಟಕ

karnataka

Union budget 2022.. ಅರ್ಥವ್ಯವಸ್ಥೆ ಸರಿಪಡಿಸುವ ಬಜೆಟ್.. ಸಚಿವ ಗೋವಿಂದ ಕಾರಜೋಳ

By

Published : Feb 1, 2022, 2:38 PM IST

ಅರ್ಥವ್ಯವಸ್ಥೆಯನ್ನ ಸರಿಪಡಿಸುವ ಬಜೆಟ್ ಇದಾಗಿದೆ. ಅನೇಕ ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನದಿ ಜೋಡಣೆ ಯೋಜನೆ ಇತಿಹಾಸದ ಪುಟ ಸೇರುವ ಘೋಷಣೆಯಾಗಿದೆ. 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆಗೆ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಹೇಳಿದರು..

Minister Govind Karjol reacts on Union budget
ಕೇಂದ್ರ ಬಜೆಟ್ ಬಗ್ಗೆ ಸಚಿವ ಗೋವಿಂದ್ ಕಾರಜೋಳ ಪ್ರತಿಕ್ರಿಯೆ

ಬೆಂಗಳೂರು :ಅರ್ಥವ್ಯವಸ್ಥೆಯನ್ನ ಸರಿಪಡಿಸುವ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಕೇಂದ್ರ ಬಜೆಟ್ ಬಗ್ಗೆ ಸಚಿವರಾದ ಗೋವಿಂದ ಕಾರಜೋಳ ಹಾಗೂ ಸಿ ಸಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಸಚಿವ ಗೋವಿಂದ್ ಕಾರಜೋಳ ಪ್ರತಿಕ್ರಿಯೆ ನೀಡಿರುವುದು..

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಪ್ರತಿ ಮನೆಗೂ ನೀರು ಕೊಡಲು 60 ಲಕ್ಷ ಕೋಟಿ ಕೊಟ್ಟಿದ್ದಾರೆ. 2 ಲಕ್ಷ ಅಂಗನವಾಡಿ ಕೇಂದ್ರಗಳನ್ನ ಮೇಲ್ದರ್ಜೆಗೆ ಏರಿಸುತ್ತಿದ್ದಾರೆ.

ಎಸ್​​ಸಿ, ಎಸ್​ಟಿ ಬಡ ರೈತರಿಗೆ ನೀರಾವರಿ ಸೌಲಭ್ಯ ಕೊಟ್ಟಿದ್ದಾರೆ. 400 ಹೊಸ ರೈಲು ಮಾರ್ಗಗಳನ್ನ ಘೋಷಣೆ ಮಾಡಿದ್ದಾರೆ. ಮೂಲಸೌಕರ್ಯಕ್ಕೆ ಹೆಚ್ಚಿನ ಹಣ ಮೀಸಲಿಟ್ಟಿದ್ದಾರೆ. ಸೋಲಾರ್ ವಿದ್ಯುತ್ ಯೋಜನೆಗೆ ಒತ್ತು ನೀಡಿದ್ದಾರೆ. 80 ಲಕ್ಷ ಮನೆ ಕೊಡುವ ಯೋಜನೆ ರೂಪಿಸಿದ್ದಾರೆ ಎಂದರು.

ಅರ್ಥವ್ಯವಸ್ಥೆಯನ್ನ ಸರಿಪಡಿಸುವ ಬಜೆಟ್ ಇದಾಗಿದೆ. ಅನೇಕ ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನದಿ ಜೋಡಣೆ ಯೋಜನೆ ಇತಿಹಾಸದ ಪುಟ ಸೇರುವ ಘೋಷಣೆಯಾಗಿದೆ. 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆಗೆ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಮಾತನಾಡಿ, 'ಆತ್ಮನಿರ್ಭರ ಭಾರತ' ಬಜೆಟ್‌ನಲ್ಲಿ ಅನಾವರಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತುಕೊಟ್ಟಿದ್ದಾರೆ. 25 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ, ನದಿ ಜೋಡಣೆ ಯೋಜನೆಯನ್ನ ನಾವು ಸ್ವಾಗತಿಸುತ್ತೇವೆ. ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿದ್ದಾರೆ.

ಶಿರಾಡಿ ಘಾಟ್ ಸಮಸ್ಯೆಗೆ 1200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. 1 ಲಕ್ಷ ಕೋಟಿ 50 ವರ್ಷದವರೆಗೆ ಬಡ್ಡಿ ರಹಿತ ಸಾಲ ಸಿಗಲಿದೆ. ಒಳ್ಳೆಯ ಬಜೆಟ್ ಕೊಟ್ಟಿದ್ದಕ್ಕೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.

ಇದನ್ನೂ ಓದಿ:ಬೆಳವಣಿಗೆ ದರ ಶೇ.9.2ರಷ್ಟು ನಿರೀಕ್ಷೆ ಸೇರಿ ಕೇಂದ್ರ ಬಜೆಟ್‌-2022-23ರ ಹೈಲೈಟ್ಸ್‌...

ABOUT THE AUTHOR

...view details