ಕರ್ನಾಟಕ

karnataka

ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ: ಮುಧೋಳದ ಡಾ.ಚಿದಾನಂದ ಬೆಳಗಲಿಗೆ ಸಚಿವ ಕಾರಜೋಳ ಅಭಿನಂದನೆ

By

Published : Feb 2, 2022, 12:09 PM IST

Updated : Feb 2, 2022, 1:39 PM IST

ಮುಧೋಳ ವಿಧಾನಸಭಾ ಕ್ಷೇತ್ರದ ಬೆಳಗಲಿ ಗ್ರಾಮದ ವಿದ್ಯಾರ್ಥಿ ಡಾ.ಚಿದಾನಂದ ಕುಂಬಾರ ಬೆಳಗಲಿ ಅವರು ನೀಟ್ ಪಿ.ಜಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಸಚಿವ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ.

Minister Govind Karjol congratulations to neet topper
ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳದ ಡಾ.ಚಿದಾನಂದ ಬೆಳಗಲಿಗೆ ಸಚಿವ ಕಾರಜೋಳ ಅಭಿನಂದನೆ

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದ ಬೆಳಗಲಿ ಗ್ರಾಮದ ವಿದ್ಯಾರ್ಥಿ ಡಾ.ಚಿದಾನಂದ ಕುಂಬಾರ ಬೆಳಗಲಿ ಅವರು ನೀಟ್ ಪಿ.ಜಿ ಪರೀಕ್ಷೆಯಲ್ಲಿ ಅತಿ ಹೆಚ್ಚು 759 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಡಾ.ಚಿದಾನಂದ ಕುಂಬಾರ ಉತ್ತಮ ಸಾಧನೆ ಹಿನ್ನೆಲೆಯಲ್ಲಿ ಮುಧೋಳ ಶಾಸಕರೂ ಆಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.

ಇಂದು ಬೆಳಗ್ಗೆ ಸಚಿವರು ಡಾ.ಚಿದಾನಂದ ಕುಂಬಾರ ಬೆಳಗಲಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮಗಾದ ಅತೀವ ಸಂತೋಷವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಬೆಳಗಲಿರವರು ತಮ್ಮ ಎಂಬಿಬಿಎಸ್ ಅಧ್ಯಯನದ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಮಾಡಿದ ಸಹಾಯ ಮತ್ತು ನೆರವು ಸ್ಮರಿಸಿದ್ದಾರೆ.

ಈ ಸ್ಮರಣೆಗೆ ಕೃತಜ್ಞತೆ ಸಲ್ಲಿಸಿದ ಸಚಿವರು, ನೆರವು ಪಡೆದು ಈ ರೀತಿ ಅತಿ ಹೆಚ್ಚಿನ ಸಾಧನೆ ಮಾಡಿದಾಗ ನಮ್ಮ ಹೆಮ್ಮೆ ಮತ್ತು ಸಂತೋಷ ಇಮ್ಮಡಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಡಾ.ಚಿದಾನಂದ ಕುಂಬಾರ ಬೆಳಗಲಿ ರವರು ಮುಂದೆ DM (Gastro enterology) ಆಯ್ದುಕೊಳ್ಳುವುದಾಗಿ ತಿಳಿಸಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Feb 2, 2022, 1:39 PM IST

TAGGED:

ABOUT THE AUTHOR

...view details