ಕರ್ನಾಟಕ

karnataka

ಟ್ರಿಬ್ಯುನಲ್​ಗಳು ಪ್ರತಿಯೊಂದು ವೈದ್ಯಕೀಯ ಬಿಲ್ ಪರಿಶೀಲಿಸುವುದು ಕಡ್ಡಾಯ: ಹೈಕೋರ್ಟ್

By

Published : Jun 23, 2022, 11:56 AM IST

Kalburgi High court
ಕಲಬುರಗಿ ಹೈಕೋರ್ಟ್ ಪೀಠ ()

ಪ್ರತಿಯೊಂದು ವೈದ್ಯಕೀಯ ಬಿಲ್ಲುಗಳನ್ನು ಅವು ಅಸಲಿಯೋ ಅಥವಾ ನಕಲಿಯಾ ಹಾಗೂ ಅವು ರಿಪೀಟ್ ಆಗಿವೆಯಾ ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ಮಾಡುವುದು ನ್ಯಾಯಮಂಡಳಿಗಳ ಕರ್ತವ್ಯ ಎಂದು ಕಲಬುರಗಿ ಹೈಕೋರ್ಟ್​ ಪೀಠ ಹೇಳಿದೆ.

ಬೆಂಗಳೂರು :ಮೋಟಾರು ಅಪಘಾತದ ಹಕ್ಕುಗಳ ನ್ಯಾಯಮಂಡಳಿಗಳು ಪ್ರತಿಯೊಂದು ವೈದ್ಯಕೀಯ ಬಿಲ್ಲುಗಳನ್ನು ಅವು ಅಸಲಿಯಾ ಅಥವಾ ನಕಲಿಯಾ ಹಾಗೂ ಅವು ರಿಪೀಟ್ ಆಗಿವೆಯಾ ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ಮಾಡುವುದು ಅವುಗಳ ಬದ್ಧ ಕರ್ತವ್ಯವಾಗಿದೆ ಎಂದು ಇತ್ತೀಚೆಗೆ ಕಲಬುರಗಿ ಹೈಕೋರ್ಟ್ ಪೀಠ ಹೇಳಿದೆ.

ನ್ಯಾಯಮಂಡಳಿಯು ತನ್ನ ಮುಂದೆ ಸಲ್ಲಿಸಲಾದ 154 ಬಿಲ್ಲುಗಳ ಪೈಕಿ ಬಹುತೇಕ ಒಂದೋ ಫೋಟೊಕಾಪಿ ಆಗಿವೆ ಅಥವಾ ಕಲರ್ ಫೋಟೊಕಾಪಿಯಾಗಿವೆ ಅಥವಾ ಅಸಲಿಯಾಗಿರುತ್ತವೆ ಮತ್ತು ಕೆಲವು ಪುನರಾವರ್ತನೆಯಾಗಿವೆ ಎಂದು ಗಮನಿಸಿದ ಪೀಠ, ಅಪಘಾತ ಪ್ರಕರಣವೊಂದರಲ್ಲಿ ಮಂಜೂರು ಮಾಡಲಾಗಿದ್ದ ಪರಿಹಾರವನ್ನು ಸಾಕಷ್ಟು ಕಡಿಮೆ ಮಾಡಿ ಆದೇಶಿಸಿತು.

ಬಿಲ್ಲುಗಳನ್ನು ಯಾವಾಗಲೂ ಕ್ರಮಾನುಗತವಾಗಿ ಸಲ್ಲಿಸಬೇಕು. ಹೀಗೆ ಮಾಡಿದಾಗ ಯಾವುದೇ ಬಿಲ್ಲು ಪುನರಾವರ್ತನೆ ಆಗಿದ್ದರೆ ಟ್ರಿಬ್ಯುನಲ್ ಅಥವಾ ಕೋರ್ಟ್ ಸುಲಭವಾಗಿ ಗುರುತಿಸಲು ಸಾಧ್ಯ ಎಂದು ನ್ಯಾಯಮೂರ್ತಿ ಜೆಎಂ ಕಾಜಿ ಹೇಳಿದರು.

ಇದನ್ನೂ ಓದಿ :ಕಾಮನ್​ವೆಲ್ತ್ ಗೇಮ್ಸ್​: ಮಹಿಳಾ ಟೇಬಲ್ ಟೆನಿಸ್ ಆಯ್ಕೆ ಪಟ್ಟಿ ಪ್ರಶ್ನಿಸಿದ್ದ ಅರ್ಚನಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details