ಕರ್ನಾಟಕ

karnataka

ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು‌ ಡಿವೈಡರ್​ಗೆ ಡಿಕ್ಕಿ

By

Published : Sep 6, 2021, 9:56 AM IST

ಯಲಹಂಕ ಫ್ಲೈ ಓವರ್ ಬಳಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

legislative council member farooq owned car met road accident
legislative council member farooq owned car met road accident

ಬೆಂಗಳೂರು:ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು ರಸ್ತೆ ವಿಭಜಕಕ್ಕೆ ಗುದ್ದಿರುವ ಘಟನೆ ಯಲಹಂಕ ಫ್ಲೈ ಓವರ್ ಬಳಿ ನಡೆದಿದೆ. ನಿನ್ನೆ ರಾತ್ರಿ 9 ಗಂಟೆ ಫಾರೂಖ್ ಒಡೆತನದ MH 02 FF 5555 ನಂಬರಿನ ಐಷಾರಾಮಿ ಫೆರಾರಿ ಪೋರ್ಟೋಫಿನೋ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ರಸ್ತೆ ವಿಭಜಕಕ್ಕೆ ಗುದ್ದಿದ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು‌

ಕಾರು ಚಲಾಯಿಸುತ್ತಿದ್ದವರು ಯಾರು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕಾರು ಭೀಕರ ಅಪಘಾತ: ಶಾಸಕರ ಪುತ್ರ, ಭಾವಿ ಸೊಸೆ ಸೇರಿ 7 ಮಂದಿ ದುರ್ಮರಣ

ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ತಮಿಳುನಾಡು ಶಾಸಕರ ಪುತ್ರ, ಭಾವಿ ಸೊಸೆ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು.

ABOUT THE AUTHOR

...view details