ಕರ್ನಾಟಕ

karnataka

'ದೇವೇಗೌಡರ ಮಕ್ಕಳು ಬೆಳಗ್ಗೆ ಪ್ರತಿಭಟನೆಗೆ ಬಂದು, ಸಂಜೆ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ'

By

Published : Dec 9, 2020, 7:01 AM IST

Updated : Dec 9, 2020, 8:13 AM IST

ಕರ್ನಾಟಕ ಭೂ ಸುಧಾರಣಾ ವಿಧೇಯಕ ವಿಧಾನ ಪರಿಷತ್​ನಲ್ಲಿ ಪಾಸ್ ಆಗಿದ್ದು, ಇದಕ್ಕೆ ಜೆಡಿಎಸ್ ಮುಖಂಡರು ಬೆಂಬಲ ಸೂಚಿಸಿರುವುದನ್ನು ವಿರೋಧಿಸಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್​ ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡರ ಮಕ್ಕಳ ವಿರುದ್ಧ ಹರಿಹಾಯ್ದರು.

ಕುರುಬೂರು ಶಾಂತ ಕುಮಾರ್
ಕುರುಬೂರು ಶಾಂತ ಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ರೈತರ ವಿರೋಧವನ್ನು ಲೆಕ್ಕಿಸದೇ ವಿಧಾನ ಪರಿಷತ್​ನಲ್ಲಿ ಭೂ ಸುಧಾರಣಾ ಕಾಯ್ದೆ ಮಂಡನೆ ಮಾಡಲು ಜೆಡಿಎಸ್​ ಬೆಂಬಲ ಸೂಚಿಸಿರುವುದನ್ನು ವಿರೋಧಿಸಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಮೌರ್ಯ ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಯಿತು.

ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ರಸ್ತೆ ತಡೆ ಚಳವಳಿ

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ಭೂ ಸುಧಾರಣಾ ವಿಧೇಯಕ ವಿಧಾನ ಪರಿಷತ್​ನಲ್ಲಿ ಪಾಸ್ ಆಗಿದ್ದು, ಇದಕ್ಕೆ ಜೆಡಿಎಸ್ ಮುಖಂಡರು ಬೆಂಬಲ ನೀಡಿದ್ದಾರೆ. ದೇವೇಗೌಡರ ಮಕ್ಕಳು ಬೆಳಗ್ಗೆ ನಮ್ಮೊಂದಿಗೆ ಪ್ರತಿಭಟನೆಗೆ ಬಂದು ಸಂಜೆ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹರಿಹಾಯ್ದರು.

ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ರಸ್ತೆ ತಡೆ ಚಳವಳಿ

ಬೆಳಗ್ಗೆ ನಮ್ಮ ಜೊತೆ ಪ್ರತಿಭಟನೆಗೆ ಬರ್ತಾರೆ, ಮಧ್ಯಾಹ್ನ ಅಲ್ಲಿ ಹೋಗಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಈಗಾಗಲೇ ಮಂಡ್ಯದಲ್ಲಿ ಜೆಡಿಎಸ್​ಗೆ ಜನ ಬುದ್ಧಿ ಕಲಿಸಿದ್ದಾರೆ. ರೈತ ವಿರೋಧಿ ಕೆಲಸ ಮಾಡಿದ್ರೆ ಏನು ಆಗುತ್ತದೆ ಅನ್ನೋದನ್ನು ರೈತರು ಮುಂದಿನ ದಿನಗಳಲ್ಲಿ ತೋರಿಸುತ್ತಾರೆ. ಸಿಎಂ ಯಡಿಯೂರಪ್ಪ ಅವರು ರೈತರ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದರೂ ಕೂಡ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ರೈತರು ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

Last Updated : Dec 9, 2020, 8:13 AM IST

ABOUT THE AUTHOR

...view details