ಕರ್ನಾಟಕ

karnataka

ವಿದೇಶಗಳಿಗೆ ನಮ್ಮ ದೇಶದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ: ಡಿಕೆಶಿ ಆತಂಕ

By

Published : Jan 27, 2022, 7:03 AM IST

ನೆಹರು ಅವರು ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಿಗೆ ನಮ್ಮ ದೇಶದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರದ ಗಡಿಯನ್ನ ಕಾಪಾಡಿಕೊಳ್ಳಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ಎಲ್ಲ ವರ್ಗದವರಿಗೂ ಸಮಾನತೆ ಕಲ್ಪಿಸಲು ಅಂಬೇಡ್ಕರ್ ನಮಗೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಂಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದ್ದಂತೆ ಇಡೀ ಭಾರತಕ್ಕೆ ಸಂವಿಧಾನ ಇದೆ. ನೆಹರು ಅವರು ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದ್ರೆ, ಇಂದು ನಮ್ಮ ದೇಶದ ಜೊತೆ ಇತರೆ ವಿದೇಶಗಳ ಬಾಂಧವ್ಯ ಕಡಿಮೆಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

73 ನೇ ಗಣರಾಜ್ಯೋತ್ಸವ ಹಿನ್ನೆಲೆ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಭಾಗವಹಿಸಿ ಅವರು ಮೊದಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಗಾಂಧಿ ಪ್ರತಿಮೆ ಬಳಿ ತೆರಳಿ ಮಾಲಾರ್ಪಣೆ ಮಾಡಿದರು.

ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನವರಿ 26 ರಂದು ಸಂವಿಧಾನವನ್ನ ಜಾರಿಗೊಳಿಸಲಾಯಿತು. ನೆಹರು ಎಲ್ಲಾ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಿಗೆ ನಮ್ಮ ದೇಶದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರದ ಗಡಿಯನ್ನ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಶೈಕ್ಷಣಿಕವಾಗಿ ಭಾರತ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಇಂದು ಆ ಶಿಕ್ಷಣ ಸರಿಯಿಲ್ಲ ಎಂದು ಬೇರೆ ಶಿಕ್ಷಣ ನೀತಿ ತರಲು ಹೊರಟಿದ್ದಾರೆ ಎಂದರು.

ಗಣರಾಜ್ಯೋತ್ಸ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಇಷ್ಟು ವರ್ಷ ಅದೇ ಶಿಕ್ಷಣ ಮಾಡಿಕೊಂಡು ಬಂದಿಲ್ವೇ?. ಹಳೇ ಶಿಕ್ಷಣದಿಂದ ಯುವಕರು ಸಾಧನೆ ಮಾಡಿಲ್ವೇ?. ಇಂದು ಬೇರೆ ಶಿಕ್ಷಣ ನೀತಿ ತರಲು ಹೊರಟಿದ್ದಾರೆ. ಮುಂದೊಂದು ದಿನ ನಾವೆಲ್ಲಾ ಸೇರಿ ಪ್ರಶ್ನೆ ಮಾಡಬೇಕಾಗುತ್ತೆ. ನಿರುದ್ಯೋಗ ಹೆಚ್ಚಾಗುತ್ತಿದೆ. ಯುವಕರಿಗೆ ಉದ್ಯೋಗ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿವರಿಸಿದರು.

ಓದಿ:ಬಿಹಾರದಲ್ಲಿ ಹಿಂಸಾರೂಪಕ್ಕೆ ತಿರುಗಿದ ರೈಲ್ವೆ ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿಕೆ

ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ತಲೆಬಾಗಬೇಕಾಯ್ತು. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಕಾಯ್ದೆಗಳನ್ನ ತರುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಸರ್ಕಾರ ವಿಫಲವಾಗಿದೆ. ಯಾರಿಗೂ ಸರಿಯಾಗಿ ಪರಿಹಾರ ನೀಡಿಲ್ಲ. ನಾವು ಮನೆ ಮನೆಗೆ ಹೋಗಿ ಅವರಿಗೆ ನ್ಯಾಯ ಒದಗಿಸಬೇಕು. ಎಲ್ಲ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಬೇಕು. ಎಲ್ಲಾ ದಾಖಲೆ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ದೇಶಕ್ಕಾಗಿ ಹೋರಾಟ ಮಾಡಿದವರಿಗೆ ಅಗೌರವ ಪ್ರದರ್ಶಿಸುತ್ತಿದ್ದಾರೆ. ದೇಶಕ್ಕಾಗಿ ಬಲಿಯಾದವರ ಬಗ್ಗೆ ಗೌರವ ಇಲ್ಲ. ಮತ್ತೆ ನಾವೆಲ್ಲಾ ಸೇರಿ ದೇಶವನ್ನ ಬಲಿಷ್ಠ ಮಾಡಬೇಕಿದೆ. ದೇಶವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಕಾಂಗ್ರೆಸ್​ನ ಕೊಡುಗೆ ಇದೆ. ಇಂದಿರಾ ಗಾಂಧಿ ಕಾಲದಲ್ಲಿ ಭಾರತ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿತ್ತು. ಕೈ ಕಾರ್ಯಕರ್ತರು ಮನೆ ಮನೆಗೆ ಹೋಗಿ ಎಲ್ಲರ ಹೃದಯ ಗೆಲ್ಲಬೇಕು. ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಬೇಕು. ನಾವು ಹೋರಾಟ ಮಾಡಿದ್ರೆ ಸರ್ಕಾರ ಅದನ್ನ ತಡೆಯಲು ಪ್ರಯತ್ನಿಸುತ್ತಿದೆ. ಈ ದೇಶದ ಇತಿಹಾಸವೇ, ಕಾಂಗ್ರೆಸ್ ಪಕ್ಷದ ಇತಿಹಾಸ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details