ಕರ್ನಾಟಕ

karnataka

ರಾಜ್ಯದಲ್ಲಿ ಲಾಕ್​ಡೌನ್ ಇಲ್ಲ, ವೀಕೆಂಡ್, ನೈಟ್​ ಕರ್ಫ್ಯೂ ಮಾತ್ರ ಜಾರಿ - ಮಾಲ್, ಜಿಮ್, ಥಿಯೇಟರ್​​ ಮತ್ತೆ ಕ್ಲೋಸ್

By

Published : Apr 20, 2021, 9:33 PM IST

Updated : Apr 20, 2021, 11:03 PM IST

ನೈಟ್​ ಕರ್ಫ್ಯೂ ಜಾರಿ
ನೈಟ್​ ಕರ್ಫ್ಯೂ ಜಾರಿ

21:30 April 20

ನಾಳೆಯಿಂದ ಮೇ ನಾಲ್ಕರವರಿಗೆ ಈ ಆದೇಶ ಜಾರಿ

ನಾಳೆಯಿಂದ ಮೇ ನಾಲ್ಕರವರಿಗೆ ಈ ಆದೇಶ ಜಾರಿ

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ 14 ದಿನಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದ್ದು, ಜಿಮ್, ಮಾಲ್, ಈಜುಕೊಳ, ಥಿಯೇಟರ್​ಗಳನ್ನು ಕ್ಲೋಸ್ ಮಾಡುವುದು ಸೇರಿದಂತೆ ಕೊರೊನಾ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ.

ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕರ್ನಾಟಕದಲ್ಲಿ ಹೊಸ ಕೊವಿಡ್ 19 ಮಾರ್ಗಸೂಚಿ ಪ್ರಕಟಿಸಲಾಗುತ್ತಿದೆ. ಏಪ್ರಿಲ್ 20 ರಿಂದ ಮೇ 4ರ ತನಕ ಹೊಸ ಮಾರ್ಗ ಸೂಚಿ ಜಾರಿಯಲ್ಲಿರಲಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಶುಕ್ರವಾರ ರಾತ್ರಿ‌ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.

ನಿತ್ಯವೂ ನೈಟ್​ ಕರ್ಫ್ಯೂ

ಸದ್ಯ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಸಮಯ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ಬದಲಾಗಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ ಬದಲಾಯಿಸಲಾಗಿದೆ. ರಾಜ್ಯದೆಲ್ಲೆಡೆ ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವನ್ನೂ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೋಟೆಲ್​, ರೆಸ್ಟೋರೆಂಟ್​ನಲ್ಲಿ ಪಾರ್ಸೆಲ್​ ಮಾತ್ರ

ಅಲ್ಲದೆ ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿವೆ. ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅವಕಾಶ ಇರಲಿದೆ. ಇನ್ನುಳಿದಂತೆ ಕೈಗಾರಿಕೆ, ವ್ಯವಸ್ಥಾಯ, ದಿನಸಿ ಮಳಿಗೆಗೆ ಅನುಮತಿ ಇದೆ. ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ ಮಾಡಬಹುದಾಗಿದೆ.

ಮದ್ಯ ಪಾರ್ಸೆಲ್​​ಗೆ ಓಕೆ!

ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಅವಕಾಶವಿದೆ, ಬಾರ್, ರೆಸ್ಟೋರೆಂಟ್​ನಲ್ಲಿ ಸರ್ವಿಸ್ ಬಂದ್ ಆಗಲಿದೆ. ಖಾಸಗಿ ಸಂಸ್ಥೆ, ಐಟಿ-ಬಿಟಿ ವರ್ಕ್ ಫ್ರಂ ಹೋಂಗೆ ಅನುಮತಿ, ಸರ್ಕಾರಿ ಕಚೇರಿ ಶೇ50ರಷ್ಟು ಹಾಜರಾತಿಗೆ ಅನುಮತಿಸಲಾಗಿದೆ. 

ಶಾಲಾ, ಕಾಲೇಜು ಬಂದ್​

ಮದುವೆಗೆ 50 ಜನ ಸೀಮಿತ ಅವಕಾಶ, ಅಂತ್ಯ ಸಂಸ್ಕಾರ ಮಾಡಲು 20 ಜನರಿಗೆ ಅವಕಾಶ, ಎಲ್ಲಾ ಶಾಲಾ ಕಾಲೇಜು, ತರಬೇತಿ ಕೇಂದ್ರಗಳು ಬಂದ್ ಆಗಲಿವೆ. 

ರಾಜ್ಯದಲ್ಲಿ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಅಂತಾರಾಜ್ಯ ಪ್ರಯಾಣಕ್ಕೂ ಯಾವುದೇ ವಿಶೇಷ ಅನುಮತಿ ಬೇಕಿಲ್ಲ. 

ಮೇ 4ರ ವರೆಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದ್ದು ಮೇ 3 ರಂದು ಮತ್ತೆ ಸಭೆ ಸೇರಿ ಮಾರ್ಗಸೂಚಿ ಮುಂದುವರಿಸುವ, ಬದಲಾಯಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

ನೂತನ ಮಾರ್ಗಸೂಚಿಗೆ ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ತಜ್ಞರ ಸಮಿತಿ ಸಲಹೆಯಂತೆ ವೀಕೆಂಡ್ ಕರ್ಫ್ಯೂ ಮಾಡಿದ್ದೇವೆ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಿ ಬೆಡ್ ಸಿಗದ ಸ್ಥಿತಿ ಎದುರಾಗಲಿದೆ ಎನ್ನುವ ಎಚ್ಚರಿಕೆ ನೀಡಿದೆ. ಹಾಗಾಗಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದೇವೆ ಎಂದು ಸಿಎಸ್​​ ಮಾಹಿತಿ​​ ನೀಡಿದರು.

Last Updated : Apr 20, 2021, 11:03 PM IST

ABOUT THE AUTHOR

...view details