ಕರ್ನಾಟಕ

karnataka

COVID-19 : ಮತ್ತೆ ಹೆಚ್ಚಿದ ಕೊರೊನಾ, 402 ಹೊಸ ಕೇಸ್ ಪತ್ತೆ

By

Published : Nov 26, 2021, 8:30 PM IST

ಕರ್ನಾಟಕದಲ್ಲಿ COVID-19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಆಗುತ್ತಿದೆ. ಇಂದು 402 ಮಂದಿಗೆ ಸೋಂಕು ದೃಢಪಟ್ಟಿದ್ದು, ಆರು ಸೋಂಕಿತರು ಮೃತಪಟ್ಟಿದ್ದಾರೆ..

New Covid Cases found in Karnataka, ಕರ್ನಾಟಕದ ಇಂದಿನ ಕೊರೊನಾ ಪ್ರಕರಣಗಳು
COVID

ಬೆಂಗಳೂರು :ರಾಜ್ಯದಲ್ಲಿಂದು 66,805 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 402 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,94,963ಕ್ಕೆ ಏರಿಕೆ ಆಗಿದೆ.

ಇತ್ತ 277 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,50,130 ಸೋಂಕಿತರು ಗುಣಮುಖರಾಗಿದ್ದಾರೆ. ಇಳಿಕೆಯಾಗಿದ್ದ ಸಾವಿನ ಸಂಖ್ಯೆ ಇದೀಗ ಮತ್ತೆ ಏರಿಕೆಯಾಗಿದೆ. ಇಂದು 6 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,193ಕ್ಕೆ ಹೆಚ್ಚಿದೆ. ಸದ್ಯ 6,492 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.0.60ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.49 ರಷ್ಟಿದೆ.

ರಾಜಧಾನಿ ಬೆಂಗಳೂರಲ್ಲಿ 224 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,55,835ಕ್ಕೆ ಏರಿಕೆ ಆಗಿದೆ. 129 ಜನರು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 12,34,272 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,327ಕ್ಕೆ ಏರಿದೆ. ಇನ್ನು 5235 ಸಕ್ರಿಯ ಪ್ರಕರಣಗಳು ಇವೆ.

ರೂಪಾಂತರಿ ಅಪ್​​ಡೇಟ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01

ABOUT THE AUTHOR

...view details