ಕರ್ನಾಟಕ

karnataka

ರಾಜ್ಯದಲ್ಲಿ ಕೊರೊನಾ ಇಳಿಕೆ: ಇಂದು 188 ಮಂದಿಗೆ ಸೋಂಕು, ಇಬ್ಬರು ಸಾವು

By

Published : Nov 1, 2021, 7:41 PM IST

ಕರ್ನಾಟಕದ ಇಂದಿನ ಕೊರೊನಾ ವರದಿ ಹೀಗಿದೆ..

corona
corona

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗ್ತಿದ್ದು, ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ.

ಇಂದು 73,924 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 188 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,88,521ಕ್ಕೆ ಏರಿಕೆ ಕಂಡಿದೆ.

ಇನ್ನು 318 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 29,41,896 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 8,512ರಷ್ಟಿದ್ದು, ಪಾಸಿಟಿವಿಟಿ ದರ ಶೇ.0.25 ರಷ್ಟಿದೆ. ಸೋಂಕಿನಿಂದ ಮೃತಪಟ್ಟರ ಸಂಖ್ಯೆ ಇದೇ ಮೊದಲ ಬಾರಿಗೆ ಇಳಿಕೆ ಕಂಡಿದ್ದು, ಮೈಸೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.‌ ಈ ಮೂಲಕ ಸಾವಿನ ಸಂಖ್ಯೆ 38,084 ತಲುಪಿದೆ.

ಬೆಂಗಳೂರಿನಲ್ಲಿ ಇಂದು 95 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,51,967 ಕ್ಕೇರಿದೆ. 148 ಜನರು ಗುಣಮುಖರಾಗಿದ್ದಾರೆ. 12,29,207 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಯಾವುದೇ ಸೋಂಕಿತರು ಮೃತಪಟ್ಟಿರುವುದು ವರದಿಯಾಗಿಲ್ಲ. ಸದ್ಯ 6478 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್‌ಡೇಟ್ಸ್:

1) ಡೆಲ್ಟಾ (Delta/B.617.2) - 1698
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) - 160
4) ಬೆಟಾ ವೈರಸ್ (BETA/B.1.351) - 8
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) - 4
6) ಈಟಾ (ETA/B.1.525) - 1
7) ಡೆಲ್ಟಾ ಸಬ್ ಲೈನ್ ಏಜ್ AY.4 - 300
8) ಡೆಲ್ಟಾ ಸಬ್ ಲೈನ್ ಏಜ್ AY .12 - 15

ABOUT THE AUTHOR

...view details