ಕರ್ನಾಟಕ

karnataka

ಖೋಡೆಸ್ ಗ್ರೂಪ್ ಮೇಲೆ ಐಟಿ ದಾಳಿ ಪ್ರಕರಣ; ಸಹೋದರರಿಬ್ಬರ ಮನೆಯಲ್ಲಿ ಪರಿಶೀಲನೆ

By

Published : Feb 9, 2021, 12:23 PM IST

ಖೋಡೆಸ್​ ಗ್ರೂಪ್ ಮೇಲೆ 15 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದ್ದು, ಮೆಜೆಸ್ಟಿಕ್​ನ ಮನೆ, ಆಫೀಸ್ ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ.

IT raid
ಐಟಿ

ಬೆಂಗಳೂರು: ನಗರದಲ್ಲಿ ಖೋಡೆಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆಸಿದ್ದು, ಬೆಳ್ಳಂ ಬೆಳಗ್ಗೆ ಲಿಕ್ಕರ್ ಮಾಲೀಕರ ಮನೆ, ಫ್ಯಾಕ್ಟರಿ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದಾರೆ.

ಇಡೀ ಖೋಡೆಸ್ ಗ್ರೂಪ್ ಮೇಲೆ 15 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದ್ದು, ಮೆಜೆಸ್ಟಿಕ್​ನ ಮನೆ, ಆಫೀಸ್ ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ. ಖೋಡೆಸ್ ಬ್ರಿವರೇಜಸ್, ಖೋಡೆ ಆರ್.ಸಿ.ಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳ ಮೇಲೆ ಐಟಿ ದಾಳಿ ಮುಂದುವರೆದಿದೆ.

ರಾಮಚಂದ್ರ ಖೋಡೆ , ಹರಿ ಖೋಡೆ ಸಹೋದರರ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಖೋಡೆಸ್ ಗ್ರೂಪ್ ಮೇಲೆ ಐಟಿ ದಾಳಿ ಪ್ರಕರಣದಲ್ಲಿ ಮುಂದುವರಿದ ಭಾಗವಾಗಿ ಇನ್ನಷ್ಟು ಮಾಹಿತಿ ಈಟಿವಿ ಭಾರತಕ್ಕೆ ದೊರೆತಿದ್ದು, ಮುಂಜಾನೆ 7 ಗಂಟೆಯಿಂದ ದಾಳಿ ಪ್ರಾರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆನಂದ್​​ ರಾವ್ ಸರ್ಕಲ್​ನಲ್ಲಿರುವ ಶೇಷಾದ್ರಿ ರಸ್ತೆಯ ಎರಡು ಮನೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಎರಡೂ ಮನೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ಇದೀಗ ನಡೆಯುತ್ತಿದೆ. ಶೇಷಾದ್ರಿ ರಸ್ತೆಯಲ್ಲಿರುವ ಖೋಡೆಸ್ ಸಹೋದರರ ಎರಡು ಮನೆಗಳಿದ್ದು, ಒಟ್ಟು 15 ಕಡೆಗಳಲ್ಲಿ ದಾಖಲಾತಿಗಳ ಪರಿಶೀಲನೆ ಮುಂದುವರಿದಿದೆ.

ABOUT THE AUTHOR

...view details