ಕರ್ನಾಟಕ

karnataka

ಪ್ರವೀಣ್ ನೆಟ್ಟಾರು ಹತ್ಯೆ ಘಟನೆ ಕುರಿತು ಹೈಕಮಾಂಡ್​ಗೆ ಮಾಹಿತಿ: ಸಿಎಂ

By

Published : Jul 28, 2022, 11:31 AM IST

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮತ್ತು ಎಲ್ಲಾ ರೀತಿಯ ಬೆಳವಣಿಗೆಗಳ ಕುರಿತು ಈಗಾಗಲೇ ಹೈಕಮಾಂಡ್​ಗೆ ಮಾಹಿತಿ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:ಪಕ್ಷದ ಯುವ‌ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮತ್ತು ಹತ್ಯೆಯ ನಂತರದ ಬೆಳವಣಿಗೆಗಳ‌ ಬಗ್ಗೆ ಪಕ್ಷದ ವರಿಷ್ಠರಿಗೆ ಸಮಗ್ರ ಮಾಹಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಪಕ್ಷದ ವರಿಷ್ಠರು ಮಾಹಿತಿ ಕೇಳಿದ್ದು, ನಿನ್ನೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯೂ ಚರ್ಚೆ ನಡೆಸಿದ್ದೇನೆ. ಹೈಕಮಾಂಡ್​ಗೆ ತಿಳಿಸಿಯೇ ಜನೋತ್ಸವ ರದ್ದುಪಡಿಸುವ ಬಗ್ಗೆ ತಡರಾತ್ರಿ ತೀರ್ಮಾನಿಸಿದೆ ಎಂದರು.

ಪ್ರವೀಣ್ ಬರ್ಬರ ಹತ್ಯೆಯಿಂದ ಪಕ್ಷದ ಕಾರ್ಯಕರ್ತರು ಆಕ್ರೋಶಭರಿತರಾಗಿರುವುದು ಸಹಜ. ಈ ನಿಟ್ಟಿನಲ್ಲಿ ಪದಾಧಿಕಾರಿಗಳ ರಾಜೀನಾಮೆ ವಿಚಾರ ಗಮನಕ್ಕೆ ಬಂದಿದೆ. ಅವರಿಗೆ ಇದು ಸೂಕ್ಷ್ಮ ಸಂದರ್ಭ, ಸಮಾಧಾನ ಮಾಡುತ್ತೇವೆ. ಮಂಗಳೂರಿಗೆ ಭೇಟಿ ವಿಚಾರದ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ ಅಮೇಲೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ಸಾಧನಾ ಸಮಾವೇಶ ರದ್ದು, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ ರಚನೆಗೆ ಸರ್ಕಾರ ನಿರ್ಧಾರ

ABOUT THE AUTHOR

...view details