ಕರ್ನಾಟಕ

karnataka

ಬಿಎಸ್​ವೈ ಆಪ್ತರು, ಗುತ್ತಿಗೆದಾರರ ಮೇಲಿನ IT ದಾಳಿ ಪ್ರಕರಣ.. ಬರೋಬ್ಬರಿ 750 ಕೋಟಿ ರೂ. ಅಕ್ರಮ ಆಸ್ತಿ ಬಯಲು!!

By

Published : Oct 12, 2021, 5:33 PM IST

Updated : Oct 12, 2021, 9:40 PM IST

Income Tax Department

ಬೆಂಗಳೂರಿನ ಉತ್ತರಹಳ್ಳಿ, ವಸಂತ ನಗರ, ಆರ್‌‌.ಟಿ.ನಗರ, ಸದಾಶಿವನಗರ, ಹೆಗಡೆ ನಗರ ಮುಂತಾದ ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.

ಬೆಂಗಳೂರು:ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಆಪ್ತರು ಸೇರಿದಂತೆ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆದಿದ್ದು, ಇದೀಗ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬಯಲಾಗಿದೆ.

ಐಟಿ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಇದೀಗ ಮಾಧ್ಯಮ ಹೇಳಿಕೆ ರಿಲೀಸ್​ ಮಾಡಿದ್ದು, ನೀರಾವರಿ, ಹೆದ್ದಾರಿ ಯೋಜನೆಗಳಲ್ಲಿ ಅಕ್ರಮ ಎಸಗಿರುವುದು ದೃಢಪಟ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಜಲಸಂಪನ್ಮೂಲ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದಡಿ ಕಳೆದ‌ ವಾರ ಮೂವರು ಗುತ್ತಿಗೆದಾರರ ಮೇಲೆ ನಡೆದಿದ್ದ ಐಟಿ ಅಧಿಕಾರಿಗಳ ದಾಳಿಯಲ್ಲಿ‌ ಸುಮಾರು 750 ಕೋಟಿ ರೂ.ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಖ್ಯವಾಗಿ ನೀರಾವರಿ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ತೆರಿಗೆ ವಂಚನೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ ಮೂವರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.‌ ದಾಳಿಯಲ್ಲಿ ಮಹತ್ವದ ದಾಖಲಾತಿ, ಆಸ್ತಿಪತ್ರ, ನಕಲಿ ಬಿಲ್ ಜಪ್ತಿ ಮಾಡಿಕೊಂಡು‌ ಪರಿಶೀಲಿಸಿದಾಗ ಮೂವರು ಗುತ್ತಿಗೆದಾರರು ಒಟ್ಟು 750 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಈ ಪೈಕಿ 487 ಕೋಟಿ ರೂಪಾಯಿ ಅಕ್ರಮ ಎಂದು ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ.

ಇನ್ನುಳಿದ‌ ಹಣ ಬಗ್ಗೆ ಅಧಿಕಾರಿಗಳು ತನಿಖೆ‌ ಮುಂದುವರೆಸಿದ್ದಾರೆ. ಗುತ್ತಿಗೆದಾರರ ಮನೆಯೊಂದರಲ್ಲಿ 4.69 ಕೋಟಿ ನಗದು, 8.67 ಕೋಟಿ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ. ಮೂವರು ಪ್ರಮುಖ ಗುತ್ತಿಗೆದಾರರು ಸುಮಾರು 382 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ. ಕಾರ್ಮಿಕರ ಹೆಸರಲ್ಲಿ ನೂರಾರೂ ಕೋಟಿ ವಂಚನೆ ಎಸಗಿರುವುದು ಗೊತ್ತಾಗಿದೆ. ಕಾರ್ಮಿಕರ ಹೆಸರಿನಲ್ಲಿ ಸಂಬಳ ಹಾಗೂ 40 ಜನರ ಹೆಸರಿನಲ್ಲಿ ಬೋಗಸ್ ಉಪಗುತ್ತಿಗೆದಾರರನ್ನು ಸೃಷ್ಟಿಸಿ ಗೋಲ್​ಮಾಲ್ ಮಾಡಲಾಗಿದೆ‌. ಪರಿಶೀಲನೆ ವೇಳೆ ಭೌತಿಕ ದಾಖಲಾತಿ ಹಾಗೂ ಡಿಜಿಟಲ್ ಡ್ಯಾಕುಮೆಂಟ್​ಗಳು ಸಿಕ್ಕಿವೆ‌ ಎಂದು ಆದಾಯ ತೆರಿಗೆ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖಾಂಶಗಳು ಇಂತಿವೆ

  • ಅ. 7ರಂದು 4 ರಾಜ್ಯಗಳ 47 ಕಡೆಗಳಲ್ಲಿ ಐಟಿ ದಾಳಿ ನಡೆಸಿತ್ತು
  • 40 ಜನರ ಹೆಸರಲ್ಲಿ ಉಪಗುತ್ತಿಗೆ ಪಡೆದು ಅಕ್ರಮ ಎಸಗಿದ್ದರು
  • 750 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ
  • ಈ ಮೊತ್ತದಲ್ಲಿ 487 ಕೋಟಿ ಲೆಕ್ಕವಿಲ್ಲದ ಆದಾಯ ಎಂದು ಒಪ್ಪಿಕೊಂಡಿರುವ ಕಂಪನಿಗಳು
  • ನೀರಾವರಿ ಹೆದ್ದಾರಿ ಯೋಜನೆಗಳಲ್ಲಿ ಅಕ್ರಮ
  • 8.67 ಕೋಟಿ ಮೌಲ್ಯದ ಚಿನ್ನ ಪತ್ತೆ
  • 29.83 ಕೋಟಿ ಮೊತ್ತದ ಬೆಳ್ಳಿ ಪತ್ತೆ
  • 382 ಕೋಟಿ ಕಾರ್ಮಿಕ ವೆಚ್ಚ ಎಂದು ತೋರಿಸಿದ್ದ ಕಂಪೆನಿಗಳು
  • ಮೂವರು ಪ್ರಮುಖ ಗುತ್ತಿಗೆದಾರರ ಮೇಲೆ ಐಟಿ ರೇಡ್​ ನಡೆದಿತ್ತು
  • ದಾಳಿ ವೇಳೆ ಒಟ್ಟಾರೆ 4.69 ಕೋಟಿ ರೂ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated :Oct 12, 2021, 9:40 PM IST

ABOUT THE AUTHOR

...view details