ಹೊಸಕೋಟೆ: ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣಾ ಅಖಾಡ ರಂಗೇರುತ್ತಿದೆ. ಇದರಲ್ಲಿ ಹೊಸಕೋಟೆ ಕ್ಷೇತ್ರ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಅದರಲ್ಲೂ ಸ್ಪರ್ಧೆಯಲ್ಲಿರುವ ಮೂರು ಪ್ರಬಲ ಸ್ಪರ್ಧಿಗಳು ಕೋಟಿ ಕುಳಗಳು ಅನ್ನೋದು ವಿಶೇಷ.
ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 221 ಕೋಟಿ. ಶರತ್ ಹೆಸರಿನಲ್ಲಿ 4,70,19,707 ರೂ. ಮೌಲ್ಯದ ಆಸ್ತಿ ಇದೆ. ಶರತ್ ಪತ್ನಿ ಹೆಸರಲ್ಲಿ 2,96,11,157 ರೂಪಾಯಿ ಮೌಲ್ಯದ ಆಸ್ತಿ ಇದೆ. ಶರತ್ ಹೆಸರಲ್ಲಿರೋ ಒಟ್ಟು ಚರಾಸ್ತಿ ಮೌಲ್ಯ 23,88,17,517 ರೂಪಾಯಿ. ಶರತ್ ಪತ್ನಿ ಹೆಸರಿನ ಚರಾಸ್ತಿ ಮೌಲ್ಯ 14,27,68,190 ರೂಪಾಯಿ.
ಶರತ್ ಬಚ್ಚೇಗೌಡ ಆಸ್ತಿ ಘೋಷಣೆ ವಿವರ ಈ ಕೆಳಗಿನಂತಿದೆ:
ಶರತ್ ಬಚ್ಚೇಗೌಡ ಮತ್ತು ಪತ್ನಿ ಪ್ರತಿಭಾ ಶರತ್ ಗೌಡ ಹೆಸರಿನ 138.15 ಕೋಟಿ ಮೌಲ್ಯದ ಆಸ್ತಿ ಘೋಷಣೆಯಾಗಿದೆ. ಶರತ್ ಬಳಿ 38.15 ಕೋಟಿ ಚರಾಸ್ತಿ ಮತ್ತು 100 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
11 ಲಕ್ಷ ರೂಪಾಯಿ ನಗದು, ಬ್ಯಾಂಕ್ನಲ್ಲಿ 1.37 ಲಕ್ಷ ರೂ. ಠೇವಣಿ ಇದೆ. ಅಪರಿಮಿತ ಪವರ್ ವೆಂಚರ್ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ 9.48 ಕೋಟಿ ಹೂಡಿಕೆ ಮಾಡಿದ್ದು, 27.22 ಕೋಟಿ ರೂ. ಸಾಲ ನೀಡಿದ್ದಾರೆ. 1.30 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರಗಳನ್ನ ಹೊಂದಿದ್ದಾರೆ. ಬ್ಯಾಂಕ್ಗಳಿಂದ 2.14 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.
ಇನ್ನು ಶರತ್ ಹೆಸರಿನಲ್ಲಿ 30.24 ಲಕ್ಷ ರೂ. ಮೌಲ್ಯದ ಪಾರ್ಚುನರ್ ಕಾರ್, 22 ಲಕ್ಷ ರೂ. ಮೌಲ್ಯದ ಇನ್ನೊವಾ ಕ್ರಿಸ್ಟಾ ಕಾರು, ಪತ್ನಿ ಹೆಸರಿನಲ್ಲಿ 52 ಲಕ್ಷ ಮೌಲ್ಯದ ಬೆಂಜ್ ಕಾರು ಇದೆ. ಮತ್ತು ಶರತ್ ಬಚ್ಚೇಗೌಡ ಬಿಇ ಮೆಕ್ಯಾನಿಕಲ್ ಪದವಿ ಮತ್ತು ಯುಎಸ್ಎ ನಲ್ಲಿ ಎಂಎಸ್ ಮಾಡಿರುವುದಾಗಿ ಚುನಾವಣಾ ನಾಮಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ.
ಚುನಾವಣಾ ನಾಮಪತ್ರ ಸಲ್ಲಿಸಿರುವ ಎಂಟಿಬಿ ನಾಗರಾಜ್ ಆಯೋಗಕ್ಕೆ ನೀಡಿರುವ ಆಸ್ತಿಯ ವಿವರಗಳು ಇಂತಿದೆ. ಅದರಲ್ಲಿ 1,12,02,23,637 ರೂ. ಎಂಟಿಬಿ ನಾಗರಾಜ್ ಹೆಸರಿನಲ್ಲಿದ್ದರೆ, 71,89,65,570 ಕೋಟಿ ರೂ. ಆಸ್ತಿ ಪತ್ನಿ ಶಾಂತಕುಮಾರಿ ಹೆಸರಿನಲ್ಲಿದೆ. ಹಾಗೆಯೇ ಎಂಟಿಬಿ ಬಳಿ 89,04,927ರೂ. ನಗದು, ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ ರೂ. ಖಾಯಂ ಠೇವಣಿಯಾಗಿ 166.97 ಕೋಟಿ ರೂ. ಇಟ್ಟಿದ್ದಾರೆ.
ಎಂಟಿಬಿ ನಾಗರಾಜ್ ಆಸ್ತಿ ಘೋಷಣೆ ವಿವರ:
ಕಳೆದ ಒಂದೂವರೆ ವರ್ಷದಲ್ಲಿ 180 ಕೋಟಿ ಆಸ್ತಿ ಹೆಚ್ಚಳವಾಗಿದ್ದು, ಕಳೆದ ವರ್ಷ 115 ಕೋಟಿ ಆಸ್ತಿ ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದರು. ಈ ಬಾರಿ 1,195 ಕೋಟಿ ಆಸ್ತಿ ಮತ್ತು 27.70 ಕೋಟಿ ಸಾಲ ಘೋಷಣೆ ಮಾಡಿದ್ದಾರೆ.
ಉಳಿತಾಯ ಖಾತೆಗಳಲ್ಲಿ 4.8 ಕೋಟಿ. ಖಾಯಂ ಠೇವಣಿಯಾಗಿ 166.96 ಕೋಟಿ. ಎಂಟಿಬಿ ಎಸ್ಟೇಟ್ ಮತ್ತು ಪ್ರಾಪರ್ಟಿಸ್ ಪಾಲುದಾರಿಕೆಯಲ್ಲಿ 100.54 ರೂ. ಹೂಡಿಕೆ. ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ 303.07 ಕೋಟಿ ಸಾಲ ನೀಡಿದ್ದಾರೆ.