ಕರ್ನಾಟಕ

karnataka

ಟಿಡಿಆರ್ ಪ್ರಮಾಣಪತ್ರ ವಿತರಿಸಲು ವಿಳಂಬವಾದ್ರೆ ಚ.ಮೀ.ಗೆ ವಾರಕ್ಕೆ ಸಾವಿರ ರೂ. ದಂಡ.. ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ

By

Published : Apr 13, 2022, 1:40 PM IST

ಮೂರು ತಿಂಗಳಿನೊಳಗೆ ಭೂ ಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಪ್ರಮಾಣಪತ್ರ ವಿತರಿಸಬೇಕು. ವಿಳಂಬವಾದಲ್ಲಿ ಒಂದು ಚದರ್​ ಮೀಟರ್‌ಗೆ ವಾರಕ್ಕೆ ಸಾವಿರ ರೂ. ಬಿಬಿಎಂಪಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

High Court orders to BBMP, High Court orders to BBMP over TDR certificate issue, Karnataka high court news, ಬಿಬಿಎಂಪಿಗೆ ಹೈಕೋರ್ಟ್ ಆದೇಶ, ಟಿಡಿಆರ್​ ಪ್ರಮಾಣ ಪತ್ರ ವಿಚಾರದಲ್ಲಿ ಬಿಬಿಎಂಪಿಗೆ ಹೈಕೋರ್ಟ್ ಆದೇಶ, ಕರ್ನಾಟಕ ಹೈಕೋರ್ಟ್​ ಸುದ್ದಿ,
ಟಿಡಿಆರ್ ಪ್ರಮಾಣ ಪತ್ರ ವಿತರಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಬೆಂಗಳೂರು:2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಹಲವು ವರ್ಷಗಳ ಹಿಂದೆ ಭೂಮಿ ನೀಡಿದ್ದ ಬಿದರಹಳ್ಳಿ ಹೋಬಳಿಯ ಕನ್ನೂರು, ದೊಮ್ಮಸಂದ್ರ ಮತ್ತು ಅದೂರು ಗ್ರಾಮಗಳ ಹತ್ತು ಮಂದಿ ಭೂ ಮಾಲೀಕರಿಗೆ ಮೂರು ತಿಂಗಳಲ್ಲಿ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಪ್ರಮಾಣಪತ್ರ ವಿತರಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ.

ರಸ್ತೆ ಅಗಲೀಕರಣಕ್ಕಾಗಿ ಭೂಮಿ ನೀಡಿ ಹಲವು ವರ್ಷ ಕಳೆದಿದ್ದರೂ ಟಿಡಿಆರ್ ವಿತರಿಸಿಲ್ಲ ಎಂದು ಆಕ್ಷೇಪಿಸಿ ವೆಂಕಟೇಶಪ್ಪ ಹಾಗೂ ಇತರೆ ಭೂ ಮಾಲೀಕರು ಸಲ್ಲಿಸಿದ್ದ ತಕರಾರುಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಓದಿ:ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಹಲವು ವರ್ಷಗಳ ಹಿಂದೆಯೇ ರಸ್ತೆ ಅಗಲೀಕರಣಕ್ಕಾಗಿ ಭೂಮಿ ನೀಡಿದ್ದಾರೆ. ಆದರೆ, ಈವರೆಗೂ ಅವರಿಗೆ ಟಿಡಿಆರ್ ವಿತರಿಸಿಲ್ಲ. ಈ ಬಗ್ಗೆ ಬಿಬಿಎಂಪಿ ಪ್ರಶ್ನಿಸಿದಾಗ, ಅರ್ಜಿದಾರರ ಭೂಮಿಯನ್ನು ರಸ್ತೆ ಅಗಲೀಕರಣಕ್ಕೆ ಬಳಸಿಲ್ಲ. ಅವರ ಭೂಮಿ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಆದ್ದರಿಂದ ಟಿಡಿಆರ್ ನೀಡಲು ಸಾಧ್ಯವಿಲ್ಲ ಎಂದಿದೆ. ಆದರೆ, ಬಿಬಿಎಂಪಿಯ ಈ ಹೇಳಿಕೆ ನ್ಯಾಯಸಮ್ಮತಲ್ಲ ಎಂದಿದೆ.

ಬಿಬಿಎಂಪಿಯ ನಡೆ ಖಾಸಗಿ ವ್ಯಕ್ತಿಯ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಂಡಂತಿದ್ದು, ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಮೂರು ತಿಂಗಳಲ್ಲಿ ಅರ್ಜಿದಾರರಿಗೆ ಟಿಡಿಆರ್ ವಿತರಿಸಬೇಕು. ಒಂದೊಮ್ಮೆ ವಿಳಂಬವಾದರೆ ಒಂದು ಚದರ್​ ಮೀಟರ್‌ಗೆ ವಾರಕ್ಕೆ ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.

ಹಾಗೆಯೇ, ಅರ್ಜಿದಾರರು ಬಯಸಿದರೆ ಬಿಬಿಎಂಪಿ ವಶಕ್ಕೆ ನೀಡಿರುವ ಭೂಮಿ ಹಿಂಪಡೆಯಬಹುದು. ಒಂದು ವೇಳೆ ಆ ಕುರಿತು ಅರ್ಜಿದಾರರ ಮನವಿ ಸಲ್ಲಿಸಿದರೆ ಆ ದಿನದಿಂದ ಎಂಟು ವಾರದೊಳಗೆ ಭೂಮಿ ಹಿಂದಿರುಗಿಸಬೇಕು. ತಪ್ಪಿದರೆ ಒಂದು ಚದರ ಮೀಟರ್‌ಗೆ ವಾರಕ್ಕೆ ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕು ಮತ್ತು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ABOUT THE AUTHOR

...view details