ಕರ್ನಾಟಕ

karnataka

ನಿರಂತರ ಮಳೆ, ಹವಾಮಾನ ವೈಪರೀತ್ಯ.. ರಾಜ್ಯದಲ್ಲಿ ಡೆಂಗ್ಯೂ, ಚಿಕುನ್​ ಗುನ್ಯಾ ಹಾವಳಿಗೆ ಜನ ತತ್ತರ

By

Published : Nov 16, 2021, 12:32 PM IST

ಕಳೆದ 2 ವರ್ಷದಿಂದ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾದಂತಹ ಸಾಂಕ್ರಾಮಿಕ ಪ್ರಕರಣಗಳು ಕಡಿಮೆಯಾಗಿದ್ದವು. ಈಗ ಮಳೆಯಿಂದಾಗಿ (Heavy rain effect) ಮತ್ತೆ ಡೆಂಗ್ಯೂ, ಚಿಕುನ್ ಗುನ್ಯಾ(dengue and chikungunya) ಎಲ್ಲೆಡೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

dengue and chikungunya are spread
ಡೆಂಗ್ಯೂ, ಚಿಕೂನ್​ ಗುನ್ಯಾ ಹಾವಳಿ ಹೆಚ್ಚಳ

ಬೆಂಗಳೂರು:ಒಂದು ವಾರದಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ(Heavy rain effect)ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ಮಲೆನಾಡಿನಂತಾಗಿದೆ. ಜಿಟಿ ಜಿಟಿ ಮಳೆ, ರಭಸವಾಗಿ ಬೀಸುವ ಗಾಳಿ ಜನರನ್ನು ನಡುಗಿಸುತ್ತಿದೆ. ಇದರ ಮಧ್ಯೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಶುರುವಾಗಿದೆ.

ಕಳೆದ 2 ವರ್ಷದಿಂದ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾದಂತಹ ಸಾಂಕ್ರಾಮಿಕ ಪ್ರಕರಣಗಳು ಕಡಿಮೆಯಾಗಿದ್ದವು. ಈಗ ಮಳೆಯಿಂದಾಗಿ ಮತ್ತೆ ಡೆಂಗ್ಯೂ, ಚಿಕುನ್ ಗುನ್ಯಾ ಎಲ್ಲೆಡೆ ಹರಡುತ್ತಿರುವುದು (dengue and chikungunya) ಆತಂಕಕ್ಕೆ ಕಾರಣವಾಗಿದೆ.

ಡೆಂಗ್ಯೂಗೆ ಐವರು ಬಲಿ, 4 ಸಾವಿರಕ್ಕೆ ಏರಿದ ಪ್ರಕರಣ

ರಾಜ್ಯಾದ್ಯಂತ ಈವರೆಗೆ 59,469 ಡೆಂಗ್ಯು ಪ್ರಕರಣಗಳಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 33,067 ಮಂದಿ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 4398 ಮಂದಿಗೆ ರೋಗದ ಲಕ್ಷಣಗಳು ದೃಢಪಟ್ಟಿವೆ. ಇತ್ತ 5 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ 38,343 ಮಂದಿಗೆ ಡೆಂಗ್ಯೂ ಹರಡಿರುವ ಬಗ್ಗೆ ಅನುಮಾನವಿದೆ. ಇದರಲ್ಲಿ 1038 ಜನರಿಗೆ ಸೋಂಕು ದೃಢಪಟ್ಟಿದೆ.

1640 ಜನರಲ್ಲಿ ಚಿಕುನ್ ಗುನ್ಯಾ

ರಾಜ್ಯಾದ್ಯಂತ 30,316 ಶಂಕಿತ ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 14,337 ಜನರ ರಕ್ತ ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಈ ಮೂಲಕ 1640 ಜನರಲ್ಲಿ ಚಿಕುನ್ ಗುನ್ಯಾ ದೃಢಪಟ್ಟಿದೆ. ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ರಾಜಧಾನಿಯ ವ್ಯಾಪ್ತಿಯಲ್ಲಿ ಶಂಕಿತ 1385 ಪ್ರಕರಣಗಳು ಪತ್ತೆಯಾಗಿದ್ದು, 102 ಜನರ ರಕ್ತದ ಮಾದರಿ ಪರೀಕ್ಷಿಸಿದಾಗ 52 ಜನರಲ್ಲಿ ಸೋಂಕು ದೃಢಪಟ್ಟಿದೆ. ಕೋಲಾರ, ತುಮಕೂರು, ಶಿವಮೊಗ್ಗ, ವಿಜಯಪುರ, ಕಲಬುರಗಿ, ಯಾದಗಿರಿ, ಮಂಡ್ಯದಲ್ಲಿ ಪ್ರಕರಣಗಳು ನೂರರ ಗಡಿ ದಾಟಿವೆ.

ಯಾವ ಜಿಲ್ಲೆಯಲ್ಲಿ, ಎಷ್ಟು ಪ್ರಕರಣ..?

1) ಕೋಲಾರ- 113

2) ತುಮಕೂರು- 143

3)ಚಿತ್ರದುರ್ಗ- 169

4) ದಾವಣಗೆರೆ- 245

5) ಶಿವಮೊಗ್ಗ- 393

6) ವಿಜಯಪುರ- 246

7) ಧಾರವಾಡ- 112

8) ಗದಗ-184

9) ಹಾವೇರಿ- 203

10)ಕಲಬುರಗಿ- 386

11)ಯಾದಗಿರಿ- 142

12)ಬೀದರ್- 130

13)ಬಳ್ಳಾರಿ- 241

14) ಕೊಪ್ಪಳ- 278

15)ಮಂಡ್ಯ- 195

16) ದಕ್ಷಿಣ ಕನ್ನಡ- 241

17) ಉಡುಪಿ- 312

ABOUT THE AUTHOR

...view details