ಕರ್ನಾಟಕ

karnataka

ಡಾ.ಶಿವರಾಮ ಕಾರಂತ ಬಡಾವಣೆ ಸ್ಥಳದ ಭೂಮಾಲೀಕರಿಗೆ ಗುಡ್ ನ್ಯೂಸ್ - ಸಕ್ರಮಗೊಳ್ಳಲಿವೆ 300 ಕಟ್ಟಡಗಳು

By

Published : Dec 2, 2021, 3:26 PM IST

ಡಾ. ಶಿವರಾಮ ಕಾರಂತ ಬಡಾವಣೆಯ ಅಧಿಸೂಚಿತ ಪ್ರದೇಶದಲ್ಲಿರುವ 300 ಕಟ್ಟಡಗಳು ಸದ್ಯದಲ್ಲೇ ಸಕ್ರಮಗೊಳ್ಳಲಿವೆ.

good news for Shivarama Karatana badavane land owners
ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ ಅಧಿಸೂಚಿತ ಪ್ರದೇಶದಲ್ಲಿರುವ 300 ಕಟ್ಟಡಗಳು ಸದ್ಯದಲ್ಲೇ ಸಕ್ರಮಗೊಳ್ಳಲಿವೆ ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ಗುಡ್ ನ್ಯೂಸ್ ನೀಡಿದೆ.

ಇದು ಆರಂಭಿಕ ಹಂತವಾಗಿದ್ದು, ಹಂತಹಂತವಾಗಿ ಸಮಿತಿಗೆ ದಾಖಲೆ ಸಲ್ಲಿಸಿದ ಎಲ್ಲ 6,200 ಕಟ್ಟಡಗಳನ್ನು ಕೂಡಾ ಸುಪ್ರೀಂಕೋರ್ಟ್ ಸಕ್ರಮಗೊಳಿಸುವ ಮುನ್ಸೂಚನೆ ಇದು ಎಂದು ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್

ಸುಪ್ರೀಂ ಆದೇಶದಂತೆ ಶಿವರಾಮ ಕಾರಂತ ಬಡಾವಣೆಗೆ 3,546 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಗೂ ಮೊದಲು ಈ ಜಾಗದಲ್ಲಿ ಈಗಾಗಲೇ ನಿರ್ಮಾಣ ಆಗಿರುವ ವಾಸದ ಮನೆ, ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಪರಿಹಾರ ಏನೆಂಬುದನ್ನು ಪರಿಶೀಲಿಸಲು, ಕಟ್ಟಡಗಳ ದಾಖಲೆ ಪಡೆಯಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಚಂದ್ರಶೇಖರ್ ಕಮಿಟಿ ರಚನೆ ಮಾಡಿತು.

24-11-2014 ರಿಂದ 3-8-2018ಕ್ಕೆ ಮೊದಲು ಕಾನೂನುಬದ್ಧವಾಗಿ ಅನುಮತಿ ಪಡೆದು ಕಟ್ಟಿದ ಕಟ್ಟಡಗಳನ್ನು ಸಕ್ರಮಗೊಳಿಸಲು ಎಲ್ಲ ಕಟ್ಟಡ ಮಾಲೀಕರಿಂದ ದಾಖಲೆಗಳನ್ನು ಪಡೆಯಲಾಯಿತು. ಅಲ್ಲದೇ 3-8- 2018ಕ್ಕೆ ಮೊದಲೇ ಜಾಗ ಖರೀದಿಸಿದ್ದರೂ ಹಣಕಾಸಿನ ಕಾರಣದಿಂದಾಗಿ ತಡವಾಗಿ ನಿರ್ಮಾಣ ಆದ ಕಟ್ಟಡಗಳ ದಾಖಲೆಗಳನ್ನೂ ಪಡೆಯಲಾಗಿದೆ.

1,624 ಕಟ್ಟಡಗಳ ಮಾಹಿತಿ ಬಂದಿದೆ:

ಒಟ್ಟು 1,624 ಕಟ್ಟಡಗಳ ಮಾಹಿತಿ ಬಂದಿದ್ದು, ಈ ಪೈಕಿ 13 ಲೇಔಟ್, ಎರಡು ಗ್ರೂಪ್ ಹೌಸಿಂಗ್ ಸ್ಕೀಮ್ ಮಾತ್ರ ಅನುಮತಿ ಪಡೆದಿವೆ(ಬಿಬಿಎಂಪಿ ಹಾಗೂ ಬಿಡಿಎಯಿಂದ). ಇದನ್ನು ಸಕ್ರಮಗೊಳಿಸಿ ಭೂಸ್ವಾಧೀನಕ್ಕೆ ಈ ಜಾಗ ಪಡೆಯದಂತೆ ಕೈಬಿ ಡಲಾಗಿದೆ. ಆದರೆ, ಹಲವಾರು ಮಾಲೀಕರು ಈ ಅವಧಿಯಲ್ಲಿ ಅನುಮತಿ ಪಡೆಯದೇ ಅಥವಾ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದವರ ಕಟ್ಟಡಗಳನ್ನೂ ಸಕ್ರಮಗೊಳಿಸಲು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಬಹಳ ದೊಡ್ಡ ವಿಚಾರ. ಇದು ಎಲ್ಲ ಬಡ ಸಾಮಾನ್ಯ ವರ್ಗದವರಿಗೆ ತಮ್ಮ ಸೂರು ಉಳಿಸಿಕೊಳ್ಳಲು ನೆರವಾಗಿದೆ ಎಂದರು.

ಆದರೆ 3-08-2018 ರ ನಂತರ ಅನುಮತಿಯಿಲ್ಲದೇ ನಿರ್ಮಾಣವಾದ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಲಾಗುತ್ತದೆ. 24-11-2014 ರಿಂದ 3-8-2018 ರ ಮಧ್ಯದ ಅವಧಿಯಲ್ಲಿ ಪ್ರಾಧಿಕಾರದಿಂದ ಅನುಮತಿ ಪಡೆದ ಕಟ್ಟಡಗಳನ್ನು, ಅನುಮತಿ ಪಡೆಯದ ಕಟ್ಟಡಗಳನ್ನೂ ಸಕ್ರಮಗೊಳಿಸಲಾಗುತ್ತಿದೆ.

  • ದಾಖಲೆಗಳನ್ನು ನೀಡಿದ ಕಟ್ಟಡಗಳು-1,624.
  • ಅನುಮತಿ ಪಡೆದ ಕಟ್ಟಡಗಳು-191.
  • ಗ್ರಾ.ಪಂ ನಿಂದ ಅನುಮತಿ ಪಡೆದ ಕಟ್ಟಡಗಳು-367.
  • ಅನುಮತಿ ಪಡೆಯದ ಕಟ್ಟಡಗಳು-338.

ಶಿವರಾಮ ಕಾರಂತ ಬಡಾವಣೆ ಜಾಗದಲ್ಲಿರುವ ಕಟ್ಟಡ ಮಾಲೀಕರ ಆಸ್ತಿಗಳನ್ನು ಉಳಿಸುವ ಬಗ್ಗೆ ನಿ.ನ್ಯಾ. ಚಂದ್ರಶೇಖರ ಸಮಿತಿ ನೀಡಿದ ವರದಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ. ಮೊದಲ ವರದಿಯಲ್ಲಿರುವ 300 ಕಟ್ಟಡಗಳನ್ನು ನಾಲ್ಕು ವಾರಗಳಲ್ಲಿ ಸಕ್ರಮಗೊಳಿಸಿ ಎಂದು 25-11-2021 ರಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಡಿಸೆಂಬರ್ 15 ರೊಳಗೆ ಮತ್ತೆ 400 ಮನೆಗಳ ವರದಿಯನ್ನು ಕಳಿಸಲಾಗುವುದು. ಈ ಮನೆಗಳು ರಾಜಕಾಲುವೆ, ಕೆರೆ ದಂಡೆ, ಬಫರ್ ಝೋನ್ ಗಳಲ್ಲಿ ಕಟ್ಟಲಾಗಿದೆಯೇ ಎಂಬುದನ್ನು ಮೊದಲೇ ಪರಿಶೀಲಿಸಿ ಸಕ್ರಮಗೊಳಿಸಲು ವರದಿ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ:ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಲ್ಲೆ ವಿಚಾರ: ಕಲಬುರಗಿ ಚೌಕ್ ಠಾಣೆಯ 4 ಕಾನ್ಸ್​​ಟೇಬಲ್​ಗಳು ಅಮಾನತು!

2018ರ ನಂತರ ಕಟ್ಟಡ ಕಟ್ಟಿದವರು ಯಾರೂ ಕಟ್ಟಡಗಳ ದಾಖಲೆ ಕೊಡಲು ಬಂದಿಲ್ಲ. 3-8-2018ರ ನಂತರ ಪ್ರಾಧಿಕಾರದಿಂದ ಯಾರೂ ಅನುನತಿ ಕೊಟ್ಟ ಹಾಗಿಲ್ಲ ಎಂದರು. ಕಾನೂನು ಪ್ರಕಾರವಾಗಿ 2018ರ ನಂತರ ಆ ಜಾಗಗಳನ್ನು ಮಾರಾಟ ಮಾಡುವ ಹಾಗೂ ಇಲ್ಲ, ಒಂದು ವೇಳೆ ಹಾಗೆ ಮಾಡಿದ್ದರೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು. ಸಕ್ರಮಗೊಳ್ಳುವ ಕಟ್ಟಡಗಳಿಗೆ ಬಿಡಿಎ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ, ಪ್ರಮಾಣ ಪತ್ರ ನೀಡಲಿದೆ ಎಂದರು.

ABOUT THE AUTHOR

...view details