ಕರ್ನಾಟಕ

karnataka

ರಾಜ್ಯದಲ್ಲಿಂದು 313 ಮಂದಿಗೆ ಕೋವಿಡ್‌ ಸೋಂಕು, ನಾಲ್ವರು ಬಲಿ

By

Published : Nov 18, 2021, 8:32 PM IST

ಕರ್ನಾಟಕದ ಇಂದಿನ ಕೊರೊನಾ ವರದಿ (Karnataka Covid Report)

Karnataka covid
covid

ಬೆಂಗಳೂರು: ರಾಜ್ಯದಲ್ಲಿಂದು 86,690 ಮಂದಿಗೆ ಕೋವಿಡ್ ಪರೀಕ್ಷೆ (Covid Test) ನಡೆಸಲಾಗಿದ್ದು, ಇದರಲ್ಲಿ 31 ಮಂದಿಗೆ ಸೋಂಕು (Covid Positive) ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,92,897 ಕ್ಕೆ ಏರಿಕೆ ಆಗಿದೆ. ಇತ್ತ 369 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,47,354ಕ್ಕೇರಿದೆ.

ಇಂದು ನಾಲ್ವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 38,165 ತಲುಪಿದೆ. ಸದ್ಯ ಸಕ್ರಿಯ ಪ್ರಕರಣಗಳು 7,349 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.36 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.27 ರಷ್ಟಿದೆ.

ವಿಮಾನ ನಿಲ್ದಾಣದಿಂದ 2,342 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 348 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ರಾಜಧಾನಿ ಬೆಂಗಳೂರಲ್ಲಿ 179 ಮಂದಿಗೆ ಸೋಂಕು (Bengaluru Covid Cases) ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,54,642ಕ್ಕೆ ಏರಿದೆ. 236 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 12,32,272 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,318ಕ್ಕೆ ಏರಿದೆ. 6051 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪ್​ಡೇಟ್ಸ್​:
ಅಲ್ಫಾ - 155
ಬೆಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01

ಇದನ್ನೂ ಓದಿ: Lockdown in Austria : ಲಸಿಕೆ ಹಾಕಿಸಿಕೊಳ್ಳದವರಿಗೆ ನಿರ್ಬಂಧ ವಿಧಿಸಿ ಆಸ್ಟ್ರಿಯಾ ಸರ್ಕಾರ ಆದೇಶ

ABOUT THE AUTHOR

...view details