ಬೆಂಗಳೂರು: ಕಳೆದ ಮೂರು ತಿಂಗಳಿನಲ್ಲಿ ಶೇ.47ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಆದರೆ ನೆರೆಹೊರೆಯ ರಾಜ್ಯಗಳಿಗೆ ಶೇ.4 ರವರೆಗೆ ಮಾತ್ರ ಎಫ್ಡಿಐ(ವಿದೇಶಿ ನೇರ ಹೂಡಿಕೆ ) ಬಂದಿದೆ ಎಂದು ಹೂಡಿಕೆದಾರರನ್ನು ಕರ್ನಾಟಕ ಬಿಟ್ಟು ನಮ್ಮ ರಾಜ್ಯಗಳಿಗೆ ಬನ್ನಿ ಎಂದು ಆಹ್ವಾನ ನೀಡಿದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಜಾನಪದ ಉತ್ಸವ-2022 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 3 ತ್ರೈಮಾಸಿಕದಲ್ಲಿ ಅತಿ ಹೆಚ್ಚು ಅಂದರೆ ಶೇ. 47 ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಪಕ್ಕದ ರಾಜ್ಯಗಳಿಗೆ 1-2 ಅಥವಾ 4 ರಷ್ಟು ಬಂದಿದೆ. 10 ಪಟ್ಟು ಹೆಚ್ಚು ಹೂಡಿಕೆ ನಮ್ಮಲ್ಲಾಗಿದೆ. ವಿಶ್ವದ ಎಲ್ಲಾ ದೇಶಗಳು ಕರ್ನಾಟಕದೆಡೆಗೆ ಬರುತ್ತಿವೆ. ಬೆಂಗಳೂರು ನಗರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.