ಕರ್ನಾಟಕ

karnataka

ಪೊಲೀಸ್ ಜೀಪ್​​ಗೆ ಕ್ಯಾಂಟರ್ ಡಿಕ್ಕಿ: ಪೇದೆಗೆ ಗಂಭೀರ ಗಾಯ

By

Published : Oct 5, 2019, 9:29 AM IST

ಸಿಸಿಬಿ ಇನ್ಸ್​ಪೆಕ್ಟರ್​​ರನ್ನು ಮನೆಗೆ ಬಿಟ್ಟು ಬರುವಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಜೀಪ್​ ಚಾಲನೆ ಮಾಡುತ್ತಿದ್ದ ಪೊಲೀಸ್​ಗೆ ಗಂಭೀರ ಗಾಯಗಳಾಗಿರುವ ಘಟನೆ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ನಡೆದಿದೆ.

ಪೊಲೀಸ್​​ಗೆ ಗಂಭೀರ ಗಾಯ

ಬೆಂಗಳೂರು:ಸಿಸಿಬಿ ಇನ್ಸ್​ಪೆಕ್ಟರ್ ಅವ​​ರನ್ನು ಮನೆಗೆ ಬಿಟ್ಟು ಬರುವಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಜೀಪ್​ ಚಾಲನೆ ಮಾಡುತ್ತಿದ್ದ ಪೊಲೀಸ್, ಗಂಭೀರವಾಗಿ ಗಾಯಗೊಂಡಿರುವ ಘಟನೆ‌‌ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ತಡರಾತ್ರಿ ನಡೆದಿದೆ.

ಪೊಲೀಸ್ ಜೀಪ್​​ಗೆ ಕ್ಯಾಂಟರ್ ಡಿಕ್ಕಿ: ಪೊಲೀಸ್​​ಗೆ ಗಂಭೀರ ಗಾಯ

ಕುಮಾರಸ್ವಾಮಿ ಎಂಬುವವರು ಗಾಯಗೊಂಡಿರುವವರು ಪೊಲೀಸ್ ಜೀಪ್ ಚಾಲಕ. ಅಪಘಾತದಿಂದ ಇವರ ಕಾಲಿನ ಮೂಳೆ‌ ಮುರಿದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ಸ್​ಪೆಕ್ಟರ್ ಕೇಶವ ಮೂರ್ತಿ ಅವರನ್ನ ಮನೆಗೆ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೊಲಾರೋ ಜೀಪ್ ನಜ್ಜುಗುಜ್ಜಾಗಿದ್ದು, ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details