ಕರ್ನಾಟಕ

karnataka

ವಿಜಯೇಂದ್ರಗೆ ಪರಿಷತ್ ಸ್ಥಾನ ಸಾಧ್ಯತೆ: ಮಂತ್ರಿಗಿರಿಗೆ ವೇದಿಕೆ ಸಜ್ಜು?

By

Published : May 14, 2022, 2:21 PM IST

ಸಂಪುಟ ಪುನಾರಚನೆ ವೇಳೆ ಬಿ ವೈ ವಿಜಯೇಂದ್ರಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

B Y Vijayendra
ಬಿ.ವೈ ವಿಜಯೇಂದ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮೇಲ್ಮನೆ ಸದಸ್ಯ ಸ್ಥಾನ ಕೊಡಲು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಅಭ್ಯರ್ಥಿಯಾಗಿ ವಿಜಯೇಂದ್ರ ಹೆಸರನ್ನು ಅಂತಿಮಗೊಳಿಸಲಾಗುವುದು ಎನ್ನಲಾಗ್ತಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪರಿಷತ್ ಚುನಾವಣಾ ಅಭ್ಯರ್ಥಿಯಾಗಿ ನಾಲ್ವರ ಹೆಸರು ಚರ್ಚೆಯಲ್ಲಿದೆ. ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹಾಗೂ ನಿರ್ಮಲ ಕುಮಾರ್ ಸುರಾನ ಹೆಸರು ಚರ್ಚೆಗೆ ಬರಲಿದೆ. ಈ‌‌ ನಾಲ್ವರ ಹೆಸರನ್ನೇ ಕೇಂದ್ರಕ್ಕೆ ಶಿಫಾರಸು ಮಾಡುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ವಿಜಯೇಂದ್ರಗೆ ಮಂತ್ರಿಪಟ್ಟ?:ಮೇಲ್ಮನೆ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಸಂಪುಟ ಪುನಾರಚನೆ ವೇಳೆ ವಿಜಯೇಂದ್ರಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. 2023ರ ಚುನಾವಣಾ ಹಿತದೃಷ್ಟಿಯಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಸಂಪೂರ್ಣವಾಗಿ ಚುನಾವಣೆಗೆ ತೊಡಗಿಸಿಕೊಳ್ಳಲು ಹಾಗೂ ಲಿಂಗಾಯತ ಯುವ ಮತ ಬ್ಯಾಂಕ್ ಸೆಳೆಯಲು ಬಿ.ವೈ.ವಿಜಯೇಂದ್ರಗೆ ಮಂತ್ರಿಪಟ್ಟ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಹೈ ಕಮಾಂಡ್ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಪುತ್ರನಿಗೆ ಮಂತ್ರಿ ಸ್ಥಾನ ನೀಡುವಂತೆ ಬಿಎಸ್​ವೈ ಒತ್ತಡ ಹಾಕುತ್ತಾ ಬಂದಿದ್ದರು. ಆದರೆ, ಇದೇ ವೇಳೆ ಹೈಕಮಾಂಡ್ ಕೆಲ ಷರತ್ತುಗಳನ್ನೂ ಹಾಕಿದೆ. ಮಂತ್ರಿ ಮಾಡಿದರೆ ಖಾತೆಗಾಗಿ ಲಾಬಿ ಮಾಡುವಂತಿಲ್ಲ. ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿಯುವಂತಿಲ್ಲ. ಕೊಟ್ಟ ಖಾತೆ ನಿಭಾಯಿಸಬೇಕು ಎಂದು ತಿಳಿಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ:ಮೇ 21ರಂದು ದಾವೋಸ್​ಗೆ ತೆರಳಲಿರುವ ಸಿಎಂ ಬೊಮ್ಮಾಯಿ: ಮೇ 26ಗೆ ವಾಪಸ್

ABOUT THE AUTHOR

...view details