ಕರ್ನಾಟಕ

karnataka

ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳಿವೆ: ಯತ್ನಾಳ್‌

By

Published : Aug 17, 2022, 10:57 PM IST

ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳಿವೆ. ನಾನು ಸಿಎಂ‌ ಆದರೆ ಕರ್ನಾಟಕದಲ್ಲಿ 150 ಸೀಟ್ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

basangouda-patil-yatnal-
ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿರೋದು ಕೇಳಿ ಸಂತೋಷವಾಗಿದೆ. ಅವರಿಗೆ ಅಭಿನಂದನೆಗಳು. ಈಗ ಒಳ್ಳೆಯದು ಮಾಡಲೇಬೇಕು. ಜಡ್ಜ್ ಸೀಟ್ ಮೇಲೆ ಕೂತಾಗ ಯತ್ನಾಳ್‌ ಸೇರಿದಂತೆ ಎಲ್ಲರಿಗೂ ಟಿಕೆಟ್ ಕೊಡಲೇಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇದೇ ವೇಳೆ, ಸಿಎಂ ಆಗುವಎಲ್ಲಾ ಅರ್ಹತೆಗಳು ನನಗಿವೆ. ನಾನು ಸಿಎಂ‌ ಆದ್ರೆ ಕರ್ನಾಟಕದಲ್ಲಿ 150 ಸೀಟ್ ಬರಲಿದೆ ಎಂದರು.

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವೀರ್ ಸಾವರ್ಕರ್ ಅವರು ಅಖಂಡ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ತಪಸ್ವಿ. ಅವರ ಫೋಟೋ ಹಾಕಲು ಯಾರ ಅನುಮತಿಯೂ ಬೇಡ. ಅಲ್ಪಸಂಖ್ಯಾತರ ಓಟಿಗಾಗಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಪ್ರಜೆಯ ರೀತಿ ಮಾತಾಡ್ತಿದ್ದಾರೆ ಎಂದರು.

ಇದನ್ನೂ ಓದಿ :ಮುಸ್ಲಿಂ ಏರಿಯಾ ಅಂದ್ರೆ ಪಾಕಿಸ್ತಾನಕ್ಕೆ ಸೇರಿದ್ಯಾ?: ಸಿದ್ದರಾಮಯ್ಯ ವಿರುದ್ಧ ಸಚಿವ ಅಶೋಕ್ ಕಿಡಿ

ABOUT THE AUTHOR

...view details