ಕರ್ನಾಟಕ

karnataka

ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ? ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿದೆಯಾ?

By

Published : Jan 14, 2022, 6:12 PM IST

Updated : Jan 14, 2022, 6:30 PM IST

availability of beds for covid treatment in Bengaluru
ಬೆಂಗಳೂರು ಕೋವಿಡ್ ಪರಿಸ್ಥಿತಿ ()

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗಾಗಿಯೇ 4 ಸರ್ಕಾರಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಆಸ್ಪತ್ರೆ ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು, 26 ಖಾಸಗಿ ಆಸ್ಪತ್ರೆ ಸೇರಿದಂತೆ 2 ಕೋವಿಡ್ ಕೇರ್ ಸೆಂಟರ್​ಗಳನ್ನು ನಿಯೋಜಿಸಲಾಗಿದೆ. ಚಿಕಿತ್ಸೆಗೆ ಒಟ್ಟು 6,518 ಬೆಡ್​ಗಳ ವ್ಯವಸ್ಥೆಯಿದೆ.

ಬೆಂಗಳೂರು: ದಿನೇ ದಿನೆ ಕೋವಿಡ್​ ಉಲ್ಬಣಗೊಳ್ಳುತ್ತಿದೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲೂ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದು, ಮೂರನೇ ಅಲೆಯಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ.

ಈ ಹಿಂದೆ ಕೋವಿಡ್​ ಎರಡನೇ ಅಲೆ ಸೋಂಕು ಹರಡುವಿಕೆ ಹೆಚ್ಚಾಗಿ ರೋಗಿಗಳಿಗೆ ಹಾಸಿಗೆ ಸಮಸ್ಯೆಯಿಂದ ಹಿಡಿದು ಔಷಧಿಯತನಕ ಎಲ್ಲದರ ಕೊರತೆ ಉಂಟಾಗಿತ್ತು. ಪರಿಣಾಮ ಹೆಚ್ಚು ಸಾವು ನೋವು ಅನುಭವಿಸಬೇಕಾಯಿತು. ಇದೀಗ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಹತ್ತು ಪಟ್ಟು ಹೆಚ್ಚು ಸೋಂಕು ಹರಡುತ್ತಿದೆ. ಸೋಂಕಿತರ ಸಂಖ್ಯೆ ಬೆಂಗಳೂರು ಒಂದರಲ್ಲೇ 90 ಸಾವಿರಕ್ಕೂ ಅಧಿಕ ಇದ್ದು, ಭಾಗಶಃ ರೋಗಿಗಳು ಹೋಂ ಐಸೋಲೇಷನ್​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಬೆಂಗಳೂರಿನಲ್ಲಿ ಕೋವಿಡ್​ ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆ, ಬೆಡ್​ಗಳ ವರದಿ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗಾಗಿಯೇ 4 ಸರ್ಕಾರಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಆಸ್ಪತ್ರೆ ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು, 26 ಖಾಸಗಿ ಆಸ್ಪತ್ರೆ ಸೇರಿದಂತೆ 2 ಕೋವಿಡ್ ಕೇರ್ ಸೆಂಟರ್​ಗಳನ್ನು ನಿಯೋಜಿಸಲಾಗಿದೆ. ಜನರಲ್ ಬೆಡ್, ಹೆಚ್​ಡಿಯು, ಐಸಿಯು, ಐಸಿಯು ವಿಥ್ ವೆಂಟಿಲೇಟರ್ ಎಲ್ಲ ಸೇರಿ 6,518 ಬೆಡ್​ಗಳ ವ್ಯವಸ್ಥೆಯಿದೆ.

ಚಿಕಿತ್ಸೆಗೆ ಹಾಸಿಗೆ ಲಭ್ಯವಿದೆಯಾ?

ಸೌಲಭ್ಯ ಇರುವ ಆಸ್ಪತ್ರೆ ಲಭ್ಯ ಬಳಕೆ ಖಾಲಿ
ಸರ್ಕಾರಿ ಮೆಡಿಕಲ್ ಕಾಲೇಜು 435 113 322
ಸರ್ಕಾರಿ ಆಸ್ಪತ್ರೆ 1,083 193 890
ಖಾಸಗಿ ಮೆಡಿಕಲ್ ಕಾಲೇಜು 3,477 23 3,454
ಖಾಸಗಿ ಆಸ್ಪತ್ರೆ 1,433 20 1,413
ಕೋವಿಡ್ ಕೇರ್ ಸೆಂಟರ್ 90 52 38

ಸದ್ಯದ ಅಂಕಿಅಂಶಗಳ ಪ್ರಕಾರ, ಜನರಲ್ ಬೆಡ್​ನಲ್ಲಿ 197 ಸೋಂಕಿತರು ಇದ್ದರೆ, ಹೆಚ್​ಡಿಯು 143, ಐಸಿಯುನಲ್ಲಿ 43, ಐಸಿಯು ವಿಥ್ ವೆಂಟಿಲೇಟರ್​ನಲ್ಲಿ 18 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಹೆಚ್ಚಿನವರು ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಶೇಕಡಾವಾರು ಪ್ರಮಾಣ

ರಾಜ್ಯದಲ್ಲಿ ಶೇ. 6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲು:

ರಾಜ್ಯದಲ್ಲಿ ಮೂರನೇ ಅಲೆಯ ಪ್ರಭಾವ ಜೋರಾಗಿದ್ದರೂ ಸಹ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 2ನೇ ಅಲೆಗಿಂತ ಕಡಿಮೆಯಾಗಿದೆ. ಈ ಕುರಿತು ರಾಜ್ಯ ವಾರ್ ರೂಂ ರಿಪೋರ್ಟ್ ಬಿಡುಗಡೆ ಮಾಡಿದೆ. ಈ ವರದಿ ಪೈಕಿ 2021ರ ಡಿಸೆಂಬರ್ 31 ರಿಂದ 2022ರ ಜನವರಿ 12ರ ವರೆಗೆ 84,067 ಸಕ್ರಿಯ ಪ್ರಕರಣಗಳಲ್ಲಿ ಶೇ. 6ರಷ್ಟು ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಶೇ. 1 ರಷ್ಟು ಸೋಂಕಿತರು ಕೋವಿಡ್ ಕೇರ್ ಸೆಂಟರ್​​ನಲ್ಲಿ ಹಾಗೂ ಶೇ.93 ರಷ್ಟು ಸೋಂಕಿತರು ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ‌

ಇದನ್ನೂ ಓದಿ:ಮೈಸೂರು: ಆಸ್ತಿ ವಿಚಾರಕ್ಕೆ ಗಲಾಟೆ, ಮಹಿಳೆಯ ಬರ್ಬರ ಹತ್ಯೆ

Last Updated :Jan 14, 2022, 6:30 PM IST

ABOUT THE AUTHOR

...view details