ಕರ್ನಾಟಕ

karnataka

ಹಾಡಹಗಲೇ ‌ಕಂಡ ಕಂಡವರಿಗೆ ಚಾಕು ಇರಿತ: ಓರ್ವ ಸಾವು, ಐವರಿಗೆ ಗಾಯ

By

Published : Oct 18, 2020, 1:47 PM IST

ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ್​ ಎಂಬಾತ ಮಾನಸಿಕ ಅಸ್ವಸ್ಥನಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈತ ನಗರದ ಬಾಳೆ ಮಂಡಿಯಿಂದ ಮೂರ್ನಾಲ್ಕು ಕಡೆ ಒಟ್ಟು ಆರು ಮಂದಿಗೆ ಚಾಕು ಇರಿದಿದ್ದಾನೆ. ಸದ್ಯ ಆರು ಮಂದಿಯಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 35 ವರ್ಷದ ಮಾರಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

attack-knife-stabbing-one-death-five-wounded-bengaluru
ಹಾಡಹಗಲೇ ‌ಕಂಡ ಕಂಡವರಿಗೆ ಚಾಕು ಇರಿತ: ಓರ್ವ ಸಾವು, ಐವರಿಗೆ ಗಾಯ..

ಬೆಂಗಳೂರು:ಹಾಡಹಗಲೇ ‌ಕಂಡ ಕಂಡವರಿಗೆ ಚಾಕು ಇರಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿರುವ ಘಟನೆ‌ ಬೆಳಕಿಗೆ ಬಂದಿದೆ.

ಹಾಡಹಗಲೇ ‌ಕಂಡ ಕಂಡವರಿಗೆ ಚಾಕು ಇರಿತ: ಓರ್ವ ಸಾವು, ಐವರಿಗೆ ಗಾಯ..

ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ್​ ಎಂಬಾತ ಮಾನಸಿಕ ಅಸ್ವಸ್ಥನಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈತ ನಗರದ ಬಾಳೆ ಮಂಡಿಯಿಂದ ಮೂರ್ನಾಲ್ಕು ಕಡೆ ಒಟ್ಟು ಆರು ಮಂದಿಗೆ ಚಾಕು ಇರಿದಿದ್ದಾನೆ. ಸದ್ಯ ಆರು ಮಂದಿಯಲ್ಲಿ ಒರ್ವನ ಸ್ಥಿತಿ ಚಿಂತಾಜನಕವಾಗಿದ್ದು, 35 ವರ್ಷದ ಮಾರಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ವಿಚಾರ ತಿಳಿದು ಆರೋಪಿಯನ್ನ ವಶಕ್ಕೆ ಪಡೆದ ಕಾಟನ್ ಪೇಟೆ ಪೊಲೀಸರು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ‌ ಸಂಜೀವ್ ಪಾಟೀಲ್ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ಮಾರಿ ಸಾವನ್ನಪ್ಪಿದ್ದು, ವೇಲಾಯುಧನ್ ಗಂಭೀರ ಸ್ಥಿತಿಯಲ್ಲಿದ್ದಾನೆ. ಪ್ರಕಾಶ್, ಆನಂದ್, ರಾಜೇಶ್ ಗೆ ಸಣ್ಣಪುಟ್ಟ ಗಾಯವಾಗಿದೆ. ಆರೋಪಿ‌ ಮಟನ್ ತರಲು ಹೋಗಿ ತದ ನಂತರ ಮಾಂಸದ ಅಂಗಡಿಯಿಂದ ಚಾಕು ತೆಗೆದುಕೊಂಡು ಬಂದಿದ್ದಾನೆ. ನಂತರ ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಚುಚ್ಚಿದ್ದಾನೆ.

ABOUT THE AUTHOR

...view details