ಕರ್ನಾಟಕ

karnataka

ಬೆಂಗಳೂರಿನಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳು ಅಂದರ್​​!

By

Published : Sep 14, 2021, 11:50 AM IST

ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ನೈಜೀರಿಯಾ ಪ್ರಜೆ ಮತ್ತು ಕೇರಳ ಮೂಲದ‌ ಪೆಡ್ಲರ್ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Bangalore drug case
ಬೆಂಗಳೂರು ಡ್ರಗ್ಸ್​​ ದಂಧೆ

ಬೆಂಗಳೂರು: ಡ್ರಗ್ಸ್​​ ದಂಧೆಯನ್ನು ಬಗೆದಷ್ಟು ಇನ್ನೂ ಆಳವಾಗಿ ಹೋಗುತ್ತಲೇ ಇದೆ. ಡ್ರಗ್ಸ್​​ ದಂಧೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಖಾಕಿ ಪಡೆ ಎಷ್ಟೇ ಪ್ರಯತ್ನಿಸಿದರು, ಒಂದಲ್ಲ ಒಂದು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಇದೀಗ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ನೈಜೀರಿಯಾ ಪ್ರಜೆ ಸೇರಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಕೊಡಿಗೆಹಳ್ಳಿಯಲ್ಲಿ ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಜೊತೆ ಕೇರಳ ಮೂಲದ‌ ಪೆಡ್ಲರ್ ಒಬ್ಬ ಸೇರಿ ಮೂವರು ದಂಧೆಕೋರರಿಂದ ಸುಮಾರು 30 ಲಕ್ಷ ರೂ. ಮೌಲ್ಯದ 500 ಎಂಡಿಎಂಎ ಎಕ್ಸ್​ಟಿಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದ್ದು, ಮಾತ್ರೆಗಳು 210 ಗ್ರಾಂ ತೂಕವಿತ್ತು.

ಇದನ್ನೂ ಓದಿ:ಹಿಂದಿ ದಿವಸ್ ವಿರೋಧಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ: ಪೊಲೀಸರಿಂದ ಹೋರಾಟಗಾರರಿಗೆ ನೋಟಿಸ್

ಆರೋಪಿಗಳು ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು, ಎಂಬುದರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಸಿಬಿ ತಂಡ ಬಂಧಿಸಿದೆ. ಇನ್ನು ಕೃತ್ಯಕ್ಕೆ ಬಳಿಸಿದ್ದ ಕಾರ್, ಮೊಬೈಲ್​ ಫೋನ್ ವಶಕ್ಕೆ ಪಡೆಯಲಾಗಿದೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಎನ್‌ಡಿಪಿಎಸ್ ಅಡಿ ಪ್ರಕರಣ ದಾಖಲಿಸಿ ಬಂಧಿತರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details