ಕರ್ನಾಟಕ

karnataka

ಶೌಚಾಲಯದಲ್ಲಿ ದಂಪತಿ ಶವ: ಹೆತ್ತವರನ್ನೇ ಕೊಲೆಗೈದ 14 ವರ್ಷದ ಬಾಲಕ!

By

Published : May 8, 2021, 1:51 AM IST

Updated : May 8, 2021, 1:04 PM IST

ಬುದ್ಧಿ ಹೇಳಿದ್ದಕ್ಕೆ ತಂದೆಯ ಮೇಲೆ ಸಿಟ್ಟು. ಅಪ್ಪನನ್ನು ಕೊಲ್ಲಲು ಹೋಗಿ ತಾಯಿಯನ್ನೂ ಕೊಂದ 14 ವರ್ಷದ ಬಾಲಕ.

ದಂಪತಿ ಕೊಲೆ
ದಂಪತಿ ಕೊಲೆ

ಶೌಚಾಲಯದಲ್ಲಿ ದಂಪತಿ ಶವ: ಹೆತ್ತವರನ್ನೇ ಕೊಲೆಗೈದ 14 ವರ್ಷದ ಬಾಲಕ!


ಬೆಂಗಳೂರು:ಸಾಂಖ್ಯಿಕ ಇಲಾಖೆ‌ ಬೆಂಗಳೂರು ಜಿಲ್ಲಾ ಕಚೇರಿಯಲ್ಲಿ ನಡೆದಿದ್ದ ದಂಪತಿ ಕೊಲೆ ಪ್ರಕರಣ ಬೇಧಿಸಿರುವ ಪೀಣ್ಯ ಪೊಲೀಸರು, ಮೃತರ ಮಗನನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಹನುಮಂತರಾಯ (42), ಹೊನ್ನಮ್ಮ (34) ಮೃತ ದಂಪತಿ.‌ ಇವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದವರು. ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಪೀಣ್ಯದ ಕರಿಹೋಬನಹಳಿ ಸಮೀಪದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಹನುಮಂತರಾಯ ಸೆಕ್ಯೂರಿಟಿ ಗಾರ್ಡ್ ಆಗಿ, ಅವರ ಪತ್ನಿ ಹೊನ್ನಮ್ಮ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಚೇರಿ‌ ಪಕ್ಕದಲ್ಲೇ ಶೆಡ್​​ನಲ್ಲಿ ವಾಸವಾಗಿದ್ದರು. ರಾತ್ರಿ ವೇಳೆ‌ ಕಚೇರಿಯಲ್ಲಿ ಮಲಗುತ್ತಿದ್ದರು.‌ ಎಂದಿನಂತೆ ಗುರುವಾರ ಬೆಳಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು.‌ ಮಾಹಿತಿ‌ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಮುರಿದು ಒಳಪ್ರವೇಶಿದಾಗ ದಂಪತಿ‌ ಕೊಲೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಅವರ 14 ವರ್ಷದ ಮಗನನ್ನು ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿರುವುದನ್ನು‌ ಒಪ್ಪಿಕೊಂಡಿದ್ದಾನೆ‌.

ಬುದ್ಧಿ ಹೇಳಿದಕ್ಕೆ ಕೋಪಗೊಂಡು ಕೊಲೆ:
14 ವರ್ಷದ ಮಗ ಏರಿಯಾ ಹುಡುಗರೊಂದಿಗೆ ಸೇರಿ‌ ಅಡ್ಡಾಡುತ್ತಿದ್ದ. ಹುಡುಗರ ಜೊತೆ ಸೇರದೆ ವಿದ್ಯೆ ಕಲಿ ಎಂದು ತಂದೆ ಹನುಮಂತರಾಯ, ಮಗನಿಗೆ ಬುದ್ಧಿ ಹೇಳಿದ್ದರು. ಇದರಿಂದ ಸಿಟ್ಟಾದ ಮಗ, ತಂದೆಯನ್ನು ಸಾಯಿಸಲು ದೊಡ್ಡಗಾತ್ರದ ಕಲ್ಲನ್ನು ತೆಗೆದುಕೊಂಡು ಬಂದಿದ್ದ. ಎಂದಿನಂತೆ ಗುರುವಾರ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ ಎದ್ದ ಮಗ ನಿದ್ರಿಸುತ್ತಿದ್ದ ತಂದೆ ಮೇಲೆ ಕಲ್ಲು ಎತ್ತಿ ಹಾಕಲು‌‌ ಮುಂದಾಗಿದ್ದ. ಆದ್ರೆ ಕೈ ಜಾರಿ ತಾಯಿ ತಲೆ ಮೇಲೆ ಹಾಕಿದ್ದಾನೆ. ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಶಬ್ಧ ಅರಿತು ಎಚ್ಚರಗೊಂಡ ತಂದೆಯನ್ನು ತಳ್ಳಿ ಕಲ್ಲು ಹಾಕಿ ಕೊಂದಿದ್ದಾನೆ.‌ ತಾಯಿ ಎಚ್ಚರವಾದರೆ ತನ್ನನ್ನು ಹೊಡೆಯುತ್ತಾಳೆ ಎಂದು ಹೆದರಿ ಆಕೆ ಮೇಲೆಯೂ ಕಲ್ಲು ಹಾಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated :May 8, 2021, 1:04 PM IST

ABOUT THE AUTHOR

...view details