ಕರ್ನಾಟಕ

karnataka

ಹಿಂದೂ ಪರ ಮೊಳಗಿದ ಗಾನ.. ಗಾಯಕಿ ಲಕ್ಷ್ಮಿ ದುಬೆ ಹಾಡಿಗೆ ಬ್ರೇಕ್ ಹಾಕಿದ ವಿಜಯನಗರ ಡಿಸಿ

By

Published : Oct 4, 2021, 1:28 PM IST

Updated : Oct 5, 2021, 9:51 AM IST

ಹಿಂದೂಪರ ಹಾಡುಗಳನ್ನು ಹಾಡಿದ್ದಕ್ಕೆ ವಿಜಯನಗರ ಜಿಲ್ಲಾ ಉದ್ಘಾಟನೆಯ ಸಮಾರೋಪ ಸಮಾರಂಭದಲ್ಲಿ ಗಾಯಕಿ ಲಕ್ಷ್ಮಿ ದುಬೆ ಅವರಿಗೆ ಜಿಲ್ಲಾಡಳಿತ ಬ್ರೇಕ್​ ಹಾಕಿದೆ.

ಗಾಯಕಿ ಲಕ್ಷ್ಮಿ ದುಬೆ
ಗಾಯಕಿ ಲಕ್ಷ್ಮಿ ದುಬೆ

ಹೊಸಪೇಟೆ(ವಿಜಯನಗರ): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲಾ ಉದ್ಘಾಟನೆಯ ಸಮಾರೋಪ ಕಾರ್ಯಕ್ರಮದಲ್ಲಿ ಗಾಯಕಿ ಲಕ್ಷ್ಮಿ ದುಬೆ ಅವರ ಹಾಡುಗಳಿಗೆ ಜಿಲ್ಲಾಡಳಿತ ಅರ್ಧಕ್ಕೆ ನಿಲ್ಲಿಸಿದ ಘಟನೆ ಭಾನುವಾರ ನಡೆಯಿತು.

ಲಕ್ಷ್ಮಿ ದುಬೆ ಅವರು ಹಿಂದೂ ಪರ ಹಾಡುಗಳನ್ನು ಹಾಡುತ್ತಿದ್ದರು. ಇದರಿಂದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಕೈ ಸನ್ನೆ ಮಾಡುವ ಮೂಲಕ ಹಾಡುಗಳನ್ನು ನಿಲ್ಲಿಸಿ ಎಂದು ಸೂಚಿಸಿದರು.

ಲಕ್ಷ್ಮಿ ದುಬೆ ಹಾಡಿಗೆ ಬ್ರೇಕ್ ಹಾಕಿದ ವಿಜಯನಗರ ಡಿಸಿ

ಡಿಸಿ ಅವರ ಸೂಚನೆಯಿಂದ ಅತೃಪ್ತಳಾದ ಗಾಯಕಿ, ಹಾಡಲು ಮತ್ತೊಂದು ಅವಕಾಶ ನೀಡಿ ಎಂದು ಮನವಿ‌ ಮಾಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸದ ಹಿನ್ನೆಲೆ ಲಕ್ಷ್ಮಿ ತಮ್ಮ ಗಾಯನ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ಹೊರ ನಡೆದರು.

Last Updated :Oct 5, 2021, 9:51 AM IST

ABOUT THE AUTHOR

...view details