ಕರ್ನಾಟಕ

karnataka

ಬೆಳಗಾವಿಯಲ್ಲಿ ವಾಡಿಕೆಗಿಂತ ಮಳೆ ಹೆಚ್ಚಳ.. ವರುಣಾರ್ಭಟಕ್ಕೆ 317 ಮನೆಗಳ ಗೋಡೆ ಕುಸಿತ

By

Published : Jul 12, 2022, 12:32 PM IST

Updated : Jul 12, 2022, 3:06 PM IST

ಬೆಳಗಾವಿ ಜಿಲ್ಲೆಯಲ್ಲಿ ವರುಣನ ಅಬ್ಬರ-ವಾಡಿಕೆಗಿಂತ 47ಮಿಲಿ ಮೀಟರ್ ನಷ್ಟು ಮಳೆ ಹೆಚ್ಚಳ- 317ಮನೆಗಳ ಗೋಡೆ ಕುಸಿತ

houses wall collapsed due to heavy rain in Belagavi, Belagavi rain news, Belagavi rain update, ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಮನೆಗಳ ಗೋಡೆಗಳು ಕುಸಿತ, ಬೆಳಗಾವಿ ಮಳೆ ಸುದ್ದಿ, ಬೆಳಗಾವಿ ಮಳೆ ಅಪ್​ಡೇಟ್​,
ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ವು 317ಮನೆಗಳ ಗೋಡೆಗಳು

ಬೆಳಗಾವಿ:ಪಶ್ಚಿಮಘಟ್ಟ ಪ್ರದೇಶ ಸೇರಿ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ 317ಮನೆಗಳ ಗೋಡೆಗಳು ಕುಸಿತವಾಗಿವೆ ಎಂದು ಜಿಲ್ಲಾಡಳಿತ ‌ಮಾಹಿತಿ ನೀಡಿದೆ. ಆದ್ರೆ, ಈವರೆಗೆ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ. ಅದರಲ್ಲಿ ‌ಪ್ರಮುಖವಾಗಿ ಮಣ್ಣಿನಿಂದ ನಿರ್ಮಿಸಿರುವ ಮನೆಗಳೇ ಹೆಚ್ಚಾಗಿದ್ದು ರಾಮದುರ್ಗ, ಚಿಕ್ಕೋಡಿ ತಾಲೂಕಿನಲ್ಲಿ ಅತಿಹೆಚ್ಚು ಮನೆಗಳ ಗೋಡೆಗಳು ಕುಸಿತವಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ವು 317ಮನೆಗಳ ಗೋಡೆಗಳು

ಓದಿ:ಬೆಳಗಾವಿ: ನಿರಂತರ ಮಳೆಗೆ ಶಾಲೆಗಳ ಗೋಡೆ ಕುಸಿತ; ನದಿ ಪಾತ್ರದ ಜನರಿಗೆ ಎಚ್ಚರಿಕೆ

ಜಿಲ್ಲೆಯಲ್ಲಿ ಜುಲೈ 1ರಿಂದ ಈವರೆಗೆ 114 ಮಿಲಿ ಮೀಟರ್ ಮಳೆ ಆಗಿದ್ದು, ವಾಡಿಕೆಯಂತೆ ಈ ಅವಧಿಯಲ್ಲಿ 67ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದ್ರೆ ವಾಡಿಕೆಗಿಂತ 47 ಮಿಲಿ ಮೀಟರ್ ನಷ್ಟು ಮಳೆ ಹೆಚ್ಚಾಗಿದೆ. ಹಾಗಾಗಿ ಹಲವಡೆ ಭಾರಿ ಹಾನಿಯಾಗಿದ್ದು ಸಾಕಷ್ಟು ಕಡೆಗಳಲ್ಲಿ ಮನೆಗಳು ಕುಸಿದಿವೆ.

  • ಚಿಕ್ಕೋಡಿ ತಾಲೂಕಿನಲ್ಲಿ- 82
  • ಕಿತ್ತೂರಿನಲ್ಲಿ‌ -39
  • ರಾಮದುರ್ಗ -43
  • ಸವದತ್ತಿ -35
  • ಬೆಳಗಾವಿ -19
  • ಮೂಡಲಗಿ- 22
  • ಕಾಗವಾಡ-24
  • ಬೈಲಹೊಂಗಲ -19
  • ಹುಕ್ಕೇರಿ- 16

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಈ ಪ್ರಮಾಣದಲ್ಲಿ ಮನೆಗಳು ಕುಸಿತವಾಗಿವೆ. ಅದೃಷ್ಟವಶಾತ್ ಈವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ‌.

Last Updated :Jul 12, 2022, 3:06 PM IST

ABOUT THE AUTHOR

...view details