ಕರ್ನಾಟಕ

karnataka

ಬಿಎಸ್​ವೈ ಕೈ ಬಲಪಡಿಸುವ ಸಲುವಾಗಿ ಅಥಣಿಯಲ್ಲಿ ಕೆಜೆಪಿ ಸ್ಪರ್ಧೆ: ಪದ್ಮನಾಭ ಪ್ರಸನ್ನ

By

Published : Nov 18, 2019, 3:21 PM IST

ಕೆಜೆಪಿ ಪಕ್ಷವು ಅಥಣಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಬಿಜೆಪಿ ವಿರುದ್ಧ ಅಥಣಿಯಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಕೆಜೆಪಿ ರಾಜ್ಯಾಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

padmanabha prasanna kumar and vinayak mathpathi

ಚಿಕ್ಕೋಡಿ: ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸೋಲಲಿದ್ದಾರೆ. ಹಾಗಾಗಿ ಯಡಿಯೂರಪ್ಪ ಕೈ ಬಲಪಡಿಸುವ ಸಲುವಾಗಿ ಕೆಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾಗಿ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಹೇಳಿದ್ದಾರೆ.

ಮಿನಿ ವಿಧಾನಸೌಧದಲ್ಲಿ ಮಾತನಾಡಿದ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ

ಅಥಣಿ ಮಿನಿ ವಿಧಾನಸೌಧದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ವಿನಾಯಕ ಮಠಪತಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಪದ್ಮನಾಭ ಪ್ರಸನ್ನ, ಅಥಣಿ ಮತಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ವಿನಾಯಕ ಮಠಪತಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಇವರು ಬಿಜೆಪಿಗೆ ಸೆಡ್ಡು ಹೊಡೆಯಲಿದ್ದಾರೆ. ಪ್ರವಾಹ ಸಂತ್ರಸ್ಥರಾಗಿರುವ ವಿನಾಯಕ ಮಠಪತಿ ಕೆಜೆಪಿ ಅಭ್ಯರ್ಥಿಯಾಗಿದ್ದು, ಐವತ್ತು ಸಾವಿರ ಮತಗಳಿಂದ ಅವರು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಪ್ತಚರ ಮಾಹಿತಿ ಪ್ರಕಾರ ಬಿಜೆಪಿ ಉಪ ಚುನಾವಣೆಯಲ್ಲಿ 5ರಿಂದ 6 ಸೀಟು ಗೆಲ್ಲಲಿದೆ. ನಮ್ಮ ಕೆಜೆಪಿ ಪಕ್ಷ ಅಥಣಿ ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ ಗೆಲ್ಲಲಿದೆ. ಯಡಿಯೂರಪ್ಪ ಸರ್ಕಾರಕ್ಕೆ ಕಡಿಮೆಯಾಗುವ ಎರಡು ಸೀಟುಗಳನ್ನು ನಾವು ತುಂಬುತ್ತೇವೆ ಎಂದು ಅವರು ಹೇಳಿದರು.

ಈ ಹಿಂದೆ ನಿಮಗೂ ಯಡಿಯೂರಪ್ಪನಿಗೂ ಅಸಮಾಧಾನವಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅದೆಲ್ಲಾ ಹಳೆ ವಿಚಾರ, ಯಡಿಯೂರಪ್ಪನಿಗೆ ತಂದೆಯ ಸ್ಥಾನ ನೀಡಿದ್ದೇನೆ. ಇವತ್ತು ನಾನೆನಿದ್ದೇನೋ ಅದು ಯಡಿಯೂರಪ್ಪ ನೀಡಿದ ಭಿಕ್ಷೆ ಎಂದರು.

Intro:ಬಿಜೆಪಿಗೆ ಸೇಡ್ಡು ಹೋಡೆದ ಕೆಜೆಪಿ ಪಕ್ಷ ಅಭ್ಯರ್ಥಿ ವಿನಾಯಕ ಮಠಪತಿBody:

ಚಿಕ್ಕೋಡಿ :

ಅಥಣಿ ಮತಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ವಿನಾಯಕ ಮಠಪತಿ ನಾಮಪತ್ರ ಸಲ್ಲಿಸಿಕೆ ಮಾಡಿದ್ದು ಬಿಜೆಪಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರವಾಹ ಸಂತ್ರಸ್ಥರಾಗಿರುವ ವಿನಾಯಕ ಮಠಪತಿ ಕೆಜೆಪಿ ಅಭ್ಯರ್ಥಿ ಐವತ್ತು ಸಾವಿರ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ. ಬಿಜೆಪಿ ಅಬ್ಯರ್ಥಿ ಮಹೇಶ ಕುಮಠಳ್ಳಿ ಸೋಲು ಖಚಿತ ಎಂದ ಕೆಜೆಪಿ ಅಧ್ಯಕ್ಷ. ಬಿಎಸ್ ವೈ ಕೈ ಬಲ ಪಡಿಸಲು ಅಬ್ಯರ್ಥಿಯನ್ನು ಕಣಕ್ಕೆ ಇಳಿಸಿದ್ಧಾಗಿ ಹೇಳಿಕೆ.

ಅಥಣಿ ಮಿನಿವಿಧಾನಸೌದದ ಚುನಾವಣಾ ನಾಮಪತ್ರ ಸಲ್ಲಿಕೆ ಚುನಾವಣೆ ಅಧಿಕಾರಿ ಜೀಲಾನಿ ಮೋಕಾಸಿಗೆ ನಾಮಪತ್ರ ಸಲ್ಲಿಕೆ ವೇಳೆ
ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸಾಥ ನೀಡಿದ್ದಾರೆ.

ಬೈಟ್ : ಪದ್ಮನಾಮ ಪ್ರಸನ್ ಕುಮಾರ - ಕೆಜಿಪಿ ರಾಜ್ಯಾಧ್ಯಕ್ಷರು

Conclusion:ಸಂಜಯ ಕೌಲಗಿ
ಚಿಕ್ಕೋಡಿ

ABOUT THE AUTHOR

...view details