ಕರ್ನಾಟಕ

karnataka

ದೇಶಕ್ಕಾಗಿ ಸಾವರ್ಕರ್​ ಹೋರಾಡಿದ್ದಾರೆ, ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ: ಕಾರಜೋಳ

By

Published : Aug 16, 2022, 8:30 PM IST

ಸಾವರ್ಕರ್ ಭಾವಚಿತ್ರವನ್ನು ಕಿತ್ತಿದ್ದು ಅಕ್ಷಮ್ಯ ಅಪರಾಧ. ಸಾವರ್ಕರ್​ ಕೂಡ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಸಚಿವ ಗೋವಿಂದ​ ಕಾರಜೋಳ ತಿಳಿಸಿದರು.

savarkar-also-fought-for-country-says-minister-govind-karjol
ದೇಶಕ್ಕಾಗಿ ಸಾವರ್ಕರ್​ ಕೂಡ ಹೋರಾಡಿದ್ದಾರೆ...ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ: ಕಾರಜೋಳ

ಬೆಳಗಾವಿ: ಕಾಂಗ್ರೆಸ್‍ನವರು ಕೀಳು ಮಟ್ಟದ ರಾಜಕಾರಣ ಮಾಡಿದ್ದರಿಂದ ಇಂದು ಮನೆಯಲ್ಲಿ ಕುಳಿತಿದ್ದಾರೆ. ಹೀಗೆ ಅದನ್ನೇ ಮುಂದುವರೆಸಿದರೆ ಸ್ವಚ್ಛವಾಗಿ ಹೋಗುತ್ತಾರೆ. ಕಾಂಗ್ರೆಸ್​ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ​ ಕಾರಜೋಳ ಟೀಕಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿಯೇ ಅವರು ಮೂಲೆ ಗುಂಪಾಗಿದ್ದಾರೆ. ಹೀಗೆ ಅದನ್ನು ಮುಂದುವರೆಸಿದ್ರೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಾರೆ. ಕಾಂಗ್ರೆಸ್ ಮನೆ ಹೇಗಾಗುತ್ತದೆ ಎಂದರೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ ಎಂದರು.

ದೇಶಕ್ಕಾಗಿ ಸಾವರ್ಕರ್​ ಕೂಡ ಹೋರಾಡಿದ್ದಾರೆ...ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ: ಕಾರಜೋಳ

ಸಾವರ್ಕರ್ ಭಾವಚಿತ್ರವನ್ನು ಕಿತ್ತಿದ್ದು ಅಕ್ಷಮ್ಯ ಅಪರಾಧವಾಗಿದ್ದು, ಸಾವರ್ಕರ್​ ಕೂಡ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಬಗ್ಗೆ ತಿಳಿಯದೇ ಕಿಡಿಗೇಡಿಗಳು ಮಾಡಿದ್ದಾರೆ. ಯಾರೂ ಈ ರೀತಿ ಮಾಡಬಾರದು. ಈ ದೇಶದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಕಾರಜೋಳ ತಿಳಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಟಿಪ್ಪು ಸುಲ್ತಾನರನ್ನು ಪ್ರಶಂಶಿಸುತ್ತಾರೆ. ಸಾವರ್ಕರ್ ಅವರನ್ನು ಟೀಕಿಸುತ್ತಾರೆ ಎಂಬ ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೆಳಗಾವಿಗೆ ಸಿದ್ದರಾಮಯ್ಯನವರೇ ಬರುತ್ತಾರೆ. ಆಗ ಅವರನ್ನೇ ಕೇಳಿ ಎಂದಷ್ಟೇ ಹೇಳಿದರು.

ಇದನ್ನೂ ಓದಿ:ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಕಾಂಗ್ರೆಸ್ಸಿನವರಿಗೆ ಯೋಗ್ಯತೆ ಇಲ್ಲ: ಸಚಿವ ಸಿಸಿ ಪಾಟೀಲ್

ABOUT THE AUTHOR

...view details