ಕರ್ನಾಟಕ

karnataka

ವಿಧಾನಪರಿಷತ್ ಚುನಾವಣೆಗೆ ಲಖನ್ ಜಾರಕಿಹೊಳಿ ಸ್ಪರ್ಧಿಸುವುದಿಲ್ಲ: ರಮೇಶ್ ಜಾರಕಿಹೊಳಿ

By

Published : Nov 18, 2021, 5:35 PM IST

ವಿಧಾನ ಪರಿಷತ್​ ಚುನಾವಣೆಗೆ ಲಖನ್ ಜಾರಕಿಹೊಳಿಗೆ ಟಿಕೆಟ್​ ನೀಡುವಂತೆ ನಾನು ಪಕ್ಷದ ಯಾವುದೇ ನಾಯಕರಿಗೆ ಕೇಳಿಲ್ಲ. ಲಖನ್​ ವಿಧಾನಪರಿಷತ್​ ಚುನಾವಣೆಗೆ ಖಂಡಿತವಾಗಿಯೂ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ತಿಳಿಸಿದರು.

ramesh-jarkiholi-reacion-on-legislative-council-election
ರಮೇಶ್ ಜಾರಕಿಹೊಳಿ

ಅಥಣಿ:ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ ಎಂಬುದು ಊಹಾಪೋಹ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ವಿಧಾನಪರಿಷತ್ ಚುನಾವಣೆಗೆ ಲಖನ್ ಜಾರಕಿಹೊಳಿ ಸ್ಪರ್ಧೆ ಕುರಿತು ರಮೇಶ್​ ಜಾರಕಿಹೊಳಿ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಗೆ ಲಖನ್ ಜಾರಕಿಹೊಳಿ ಖಡಾಖಂಡಿತವಾಗಿ ಸ್ಪರ್ಧಿಸುವುದಿಲ್ಲ. ನಾನು ಯಾವ ವರಿಷ್ಠರ ಹತ್ತಿರವು ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಪಟ್ಟು ಹಿಡಿದಿಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು ಎಂದು ಸ್ಪಷ್ಟನೆ ನೀಡಿದರು.

ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ಅಭ್ಯರ್ಥಿಯಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಅವರಿಗೋಸ್ಕರ ಇವತ್ತಿನಿಂದ ನಾನು ಪ್ರಚಾರ ಕೈಗೊಂಡಿದ್ದೇನೆ. ಬೆಳಗಾವಿಯಿಂದ ಬಿಜೆಪಿಯಿಂದ ಒಬ್ಬರೇ ಸ್ಪರ್ಧೆಗಿಳಿದಿದ್ದಾರೆ. ಎರಡನೇ ಅಭ್ಯರ್ಥಿ ಹಾಕುವುದಿಲ್ಲ ಎಂದು ತಿಳಿಸಿದರು.

ಶಾಸಕ ಯತ್ನಾಳ್ ಭೇಟಿ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭೇಟಿಗೆ ವಿಶೇಷ ಅರ್ಥ ಏನು ಇಲ್ಲ. ನಾನು ಮಹಾರಾಷ್ಟ್ರದ ಸಾಂಗ್ಲಿಗೆ ಹೋಗಿದ್ದೆ. ರೋಡ್ ಸರಿ ಇಲ್ಲದ ಕಾರಣ ವಿಜಯಪುರ ಮಾರ್ಗವಾಗಿ ಬರಬೇಕಾದರೆ ಯತ್ನಾಳ್ ಅವರು ಭೇಟಿಯಾದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ. ಇದಕ್ಕೆ ವಿಶೇಷ ಅರ್ಥವೂ ಇಲ್ಲವೆಂದು ತಿಳಿಸಿದರು.

ಗೆಲುವು ಖಚಿತ: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಬಿಜೆಪಿ ಅಭ್ಯರ್ಥಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮತ್ತೆ ಬಹು ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ರಮೇಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details