ಕರ್ನಾಟಕ

karnataka

ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್​ಗಿಲ್ಲ ಬೆಂಬಲ.. ನಾಡದ್ರೋಹಿಗಳಿಗೆ ಮತ್ತೊಮ್ಮೆ ಮುಖಭಂಗ

By

Published : Dec 14, 2021, 11:37 AM IST

Updated : Dec 14, 2021, 12:05 PM IST

MES protest call: ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್ ಕರೆಗೆ ಬೆಂಬಲ ದೊರೆತಿಲ್ಲ. ಮರಾಠಿ ಭಾಷಿಗರು ಕೂಡ ಎಂಇಎಸ್ ಬಂದ್ ಕರೆಗೆ ಸ್ಪಂದಿಸದಿರುವುದು ಇಲ್ಲಿ ಗಮನಿಸಬೇಕಾದ ಅಂಶ.

no response for belagavi band
ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್​ಗಿಲ್ಲ ಬೆಂಬಲ

ಬೆಳಗಾವಿ: ಎಂಇಎಸ್ ಮುಖಂಡನಿಗೆ ಮಸಿ ಸುರಿದ ಘಟನೆ ಖಂಡಿಸಿ ಎಂಇಎಸ್ ನೀಡಿದ್ದ ಬೆಳಗಾವಿ ಬಂದ್ ಕರೆಗೆ ಬೆಂಬಲ ದೊರೆತಿಲ್ಲ. ಕುಂದಾನಗರಿಯ ಜನತೆ ಬಂದ್​​ಗೆ ಬೆಂಬಲಿಸದಿರುವುದರಿಂದ ಎಂಇಎಸ್​ಗೆ ಮತ್ತೊಮ್ಮೆ ಮುಖಭಂಗವಾಗಿದೆ.

ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್​ಗಿಲ್ಲ ಬೆಂಬಲ

ಮರಾಠಿ ಭಾಷಿಗರು ಕೂಡ ಎಂಇಎಸ್ ಬಂದ್ ಕರೆಗೆ ಸ್ಪಂದಿಸದಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಕಾರ್ಯಕರ್ತರು ಸೋಮವಾರ ಮಹಾಮೇಳಾವ್ ನಡೆಸುತ್ತಿದ್ದರು. ಇದನ್ನು ಖಂಡಿಸಿ ಎಂಇಎಸ್ ಮುಖಂಡ ದೀಪಕ್​ ದಳವಿಗೆ ಕನ್ನಡ ಪರ ಹೋರಾಟಗಾರ ಕಪ್ಪು ಮಸಿ ಸುರಿದಿದ್ದರು. ಕಪ್ಪು ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್ ಮುಖಂಡರು ಇಂದು ಬೆಳಗಾವಿ ಬಂದ್ ಕರೆ ಕೊಟ್ಟಿದ್ದರು.

ಆದರೆ ಎಂಇಎಸ್ ಕರೆಗೆ ಬೆಳಗಾವಿ ಜನತೆ ಕ್ಯಾರೇ ಎಂದಿಲ್ಲ. ಎಂದಿನಂತೆ ಕುಂದಾನಗರಿಯಲ್ಲಿ ಸಂಚಾರ, ವ್ಯಾಪಾರ ಆರಂಭವಾಗಿದೆ. ಕೆಲವು ನಗರಗಳಲ್ಲಿ ಪ್ರತಿ ಮಂಗಳವಾರದಂತೆ ಇಂದೂ ಮಾರುಕಟ್ಟೆ ಬಂದ್ ಆಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಾಜಿ ಉದ್ಯಾನವನದಲ್ಲಿ ಪೊಲೀಸರ ಬಿಗಿ ಭದ್ರತೆ ಇದೆ.

ಇದನ್ನೂ ಓದಿ:ನ್ಯಾಯಕ್ಕಾಗಿ ಭಾವಿ ವಕೀಲರ ಹೋರಾಟ : ಸುವರ್ಣಸೌಧದ ಎದುರು ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

Last Updated : Dec 14, 2021, 12:05 PM IST

ABOUT THE AUTHOR

...view details