ಕರ್ನಾಟಕ

karnataka

ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ..!

By

Published : Apr 9, 2022, 12:02 PM IST

ಕೆಎಂಎಫ್​ನ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಮಾಯವಾಗಿದೆ. ಪ್ಯಾಕೆಟ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳಿದ್ದು, ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

No kannada on KMF nandini milk packet
ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಮಾಯ

ಬೆಳಗಾವಿ: ಕನ್ನಡಿಗರ ಮನ ಗೆದ್ದಿರುವ ಕೆಎಂಎಫ್​ನ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯವಾಗಿದೆ. ಕಳೆದ ಕೆಲ ದಿನಗಳಿಂದ ಸರಬರಾಜು ಆಗುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಬರಹ ಇಲ್ಲದಂತಾಗಿದೆ. ಕೆಎಂಎಫ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಂದಿನಿ ಪ್ರೊಡಕ್ಟ್ ಕರ್ನಾಟಕದ್ದೋ? ಅಲ್ವೋ? ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳಿದ್ದು, ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಕೊನೆ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ವ್ಯಾಪಿಸಿದ ಬೆಂಕಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅರಬಾಂವಿ ಶಾಸಕರೂ ಆಗಿರುವ ಬಾಲಚಂದ್ರ ‌ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ಮಾಯವಾಗಿರುವ ಕನ್ನಡಕ್ಷರಗಳು ನಂದಿನ ಹಾಲಿನ ಪ್ಯಾಕೆಟ್ ಮೇಲೆ ಹಾಕಬೇಕು ಎಂದು ಬಾಲಚಂದ್ರ ‌ಜಾರಕಿಹೊಳಿ ಅವರ ಬಳಿ ‌ಕನ್ನಡಿಗರು ಆಗ್ರಹಿಸಿದ್ದಾರೆ. ಈ‌ ಮೊದಲು ನಂದಿನ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ‌ಅಕ್ಷರಗಳೇ ಇರುತ್ತಿದ್ದವು. ಆದರೆ ಕಳೆದ ಕೆಲ ದಿನಗಳಿಂದ ಸರಬರಾಜು ಆಗುತ್ತಿರುವ ‌ನಂದಿನಿ ‌ಹಾಲಿನ ಪ್ಯಾಕೆಟ್​ನಲ್ಲಿ ಕನ್ನಡ ಅಕ್ಷರಗಳು ‌ಮಾಯವಾಗಿವೆ.

ABOUT THE AUTHOR

...view details