ಕರ್ನಾಟಕ

karnataka

ಗುತ್ತಿಗೆದಾರನ ಸಾವಿನ ಬಗ್ಗೆ ದಾಖಲೆಗಳಿದ್ದರೆ ಇಂದೇ ಬಿಡುಗಡೆ ಮಾಡಲಿ : ರಮೇಶ್ ಜಾರಕಿಹೊಳಿಗೆ ಶಾಸಕಿ ಹೆಬ್ಬಾಳ್ಕರ್ ಸವಾಲು

By

Published : Apr 15, 2022, 2:34 PM IST

MLA Lakshmi Hebbalkar

ನಾವು ಹೋರಾಟ ಮಾಡಿದ್ದು, ಸಂತೋಷ ಪಾಟೀಲ್ ಕುಟುಂಬಕ್ಕೆ ನ್ಯಾಯ ಕೊಡಿಸಲು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು..

ಬೆಳಗಾವಿ :ಗುತ್ತಿಗೆದಾರ ಸಂತೋಷ ಪಾಟೀಲ್​​ ಆತ್ಮಹತ್ಯೆ ಹಿಂದೆ ಮಹಾನಾಯಕನ ಕೈವಾಡ ಇದ್ದು, ಸೋಮವಾರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್​​ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುವೆ. ದಾಖಲೆ ಬಿಡುಗಡೆಗಾಗಿ ಅವರು ಸೋಮವಾರದವರೆಗೆ ಕಾಯುವುದು ಬೇಡ. ಧಾರಾವಾಹಿಯಲ್ಲಿ ಕುತೂಹಲ ಕ್ರಿಯೇಟ್ ಮಾಡುವ ರೀತಿ ಇಲ್ಲಿ ಮಾಡುವುದು ಬೇಡ. ದಾಖಲೆಗಳಿದ್ದರೆ ಇಂದೇ, ಈ ಘಳಿಗೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿರುವುದು..

ಅವರ ಬೇಜವಾಬ್ದಾರಿ ಹೇಳಿಕೆಯಿಂದ ಗೊಂದಲ ಸೃಷ್ಟಿ ಆಗುತ್ತಿದೆ. ನಾವು ಹೋರಾಟ ಮಾಡಿದ್ದು, ಸಂತೋಷ ಪಾಟೀಲ್ ಕುಟುಂಬಕ್ಕೆ ನ್ಯಾಯ ಕೊಡಿಸಲು. ಕೆ ಎಸ್ ಈಶ್ವರಪ್ಪ ಬಂಧನ ಆಗಬೇಕು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರು ಯಾರು?. ಇಂತವರ ರಕ್ಷಣೆ ಮಾಡಿದ್ರೆ ಜನ ಸಾಮಾನ್ಯರ ಹಿತ ಕಾಪಾಡುವುದು ಹೇಗೆ?. ಗುತ್ತಿಗೆದಾರರ ಅಳಲು ಕೇಳುವವರು ಯಾರು?.

ಪ್ರತಿ ಇಲಾಖೆಯ ಗುತ್ತಿಗೆದಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಪಕ್ಷ ನಾಳೆಯಿಂದ ಜಿಲ್ಲಾವಾರು ಪ್ರವಾಸ ಕಾರ್ಯಕ್ರಮ ಆರಂಭಿಸಲಿದೆ. ವಿಧಾನಸೌಧದಲ್ಲಿ ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಡಿಕೆಶಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಏ.17ರಂದು ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಂತೋಷ ಪಾಟೀಲ್ ಮನೆಗೆ ನಿರಾಣಿ ಹೋಗಿ ಬಂದಿದ್ದಾರೆ. ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಎರಡು ಸಲ ಈಶ್ವರಪ್ಪ ಬಳಿ ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ. ರಮೇಶ್​ ಜಾರಕಿಹೊಳಿ ಕೆಲಸ ಆಗಿದೆ ಎಂದಿದ್ದಾರೆ. ಬಿಜೆಪಿ ಪದಾಧಿಕಾರಿಗಳು ಸಂತೋಷ ನಮ್ಮ ಕಾರ್ಯಕರ್ಯ ಅಲ್ಲ ಎಂದಿದ್ದಾರೆ. ಎಲ್ಲ ಗೊಂದಲವೂ ಬಿಜೆಪಿ ಪಕ್ಷದಲ್ಲೇ ಇವೆ. ಇದನ್ನು ಮೊದಲು ಸರಿ ಮಾಡಲಿ ಎಂದರು.

ಸಂತೋಷ ಪಾಟೀಲ್ ಕೆಲಸ ಮಾಡುವಾಗ ರಮೇಶ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ನಾನು 10 ಬಾರಿ ಅವರನ್ನು ಕರೆಸುವ ಯತ್ನ ಮಾಡಿದೆ. ತಾಪಂ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಅವನು ನನ್ನ ಬಳಿ ಬರಲೇ ಇಲ್ಲ. ನಾನು ಬಿಜೆಪಿ, ಬಿಜೆಪಿ ಎನ್ನುತ್ತಲೇ ಇದ್ದ. ನಾನು ರಮೇಶ್ ಜಾರಕಿಹೊಳಿ ಫಾಲೋವರ್ ಎನ್ನುತ್ತಿದ್ದ. ಯಾರು ಕೆಲಸ ಮಾಡಿಸಿದರು, ಯಾರು ಪ್ರಚೋದನೆ ಮಾಡಿದ್ದರು. ಯಾರ ಕುಮ್ಮಕ್ಕು, ಆಶ್ವಾಸನೆ ಮೇಲೆ ಸಂತೋಷ ಪಾಟೀಲ್ ಕಾಮಗಾರಿ ಮಾಡಿದ್ದರು.

108 ಕಾಮಗಾರಿ ಕಳಪೆಯಾಗಿವೆ ಎಂದು ನಾನು ಏ.4ರಂದು ಹೇಳಿದ್ದ ವಿಚಾರವನ್ನು ಟ್ರೋಲ್ ಮಾಡಲಾಗುತ್ತಿದೆ. ನಾನು ಅದನ್ನು ಸ್ವಾಗತಿಸುತ್ತೇನೆ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ. ಇಲಾಖೆ ಅಧಿಕಾರಿಗಳ ಜವಾಬ್ದಾರಿ ಇದೆ.‌ ಜಿಪಂ ಸಿಇಒ ಅವರನ್ನು ಮೂರು ಬಾರಿ ಭೇಟಿಯಾಗಿದ್ದೇನೆ. ನನ್ನ ಗಮನಕ್ಕೆ ಬಂದಿದ್ದರಿಂದಲೇ ನಾನು ಓಡಾಡಿದ್ದೇನೆ. ಈಶ್ವರಪ್ಪನವರ ಭರವಸೆ ಮೇಲೆ ಸಂತೋಷ ಪಾಟೀಲ್ ಕೆಲಸ ಮಾಡಿದ್ದಾನೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷನ ವಿರುದ್ಧವೂ ತನಿಖೆ ಆಗಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯಿಸಿದರು.

ಇದನ್ನೂ ಓದಿ:ಈಶ್ವರಪ್ಪ ಅಪರಾಧ ಮಾಡ್ದೇ ಇದ್ರೂ ಆರೋಪ ಬಂದಿದೆ : ಸಂತೋಷ್​ನದ್ದು ಡೆತ್​ನೋಟ್ ಇಲ್ಲ, ವಾಟ್ಸ್‌ಆ್ಯಪ್​ ಸಂದೇಶದ ತನಿಖೆ.. ಆರಗ

ABOUT THE AUTHOR

...view details