ಕರ್ನಾಟಕ

karnataka

ಪ್ರಯಾಣಿಕರ ಬಂಗಾರ ಮರಳಿಸಿ ಪ್ರಾಮಾಣಿಕತೆ ಮೆರೆದ ಅಥಣಿ ಬಸ್ ಕಂಡಕ್ಟರ್

By

Published : Nov 13, 2021, 9:14 PM IST

ಬಸ್​ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ 15 ಗ್ರಾಮ ಬಂಗಾರ ಮತ್ತು 10 ಗ್ರಾಮ ಬೆಳ್ಳಿ ಆಭರಣಗಳನ್ನು ಮರಳಿ ಅದರ ಮಾಲೀಕರಿಗೆ ಒಪ್ಪಿಸುವ ಮೂಲಕ ಅಥಣಿ ಬಸ್​​ (bus conductor return gold) ಕಂಡಕ್ಟರ್ ಮಾನವೀಯತೆ ಮೆರೆದಿದ್ದಾರೆ. ಅಥಣಿ ಕೆಎಸ್​ಆರ್​ಟಿಸಿ ಘಟಕದ ಹಿರಿಯ ಅಧಿಕಾರಿಗಳಿಂದ ಪ್ರಶಾಂತ್ ಕಟಗೇರಿಗೆ ಅವರನ್ನು ಸನ್ಮಾನಿಸಲಾಯಿತು..

bus-conductor-return-gold-to-travelers
ಅಥಣಿ ಬಸ್ ಕಂಡಕ್ಟರ್

ಅಥಣಿ :ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಅಂದಾಜು 15 ಗ್ರಾಮ ಬಂಗಾರ ಮತ್ತು 10 ಗ್ರಾಮ ಬೆಳ್ಳಿ ಆಭರಣಗಳನ್ನು ಮರಳಿ ಅದರ ಮಾಲೀಕರಿಗೆ ಒಪ್ಪಿಸುವ ಮೂಲಕ ಕಂಡಕ್ಟರ್ (bus conductor return gold) (ನಿರ್ವಾಹಕ)ಮಾನವೀಯತೆ ಮೆರೆದಿದ್ದಾರೆ.

ಅಥಣಿ-ಜಮಖಂಡಿ ಬಸ್​​ನಲ್ಲಿ ರಡ್ಡೇರಹಟ್ಟಿ ಗ್ರಾಮದ ಮಹಿಳೆ ಬಂಗಾರ ಇದ್ದ ಕೈಚೀಲ ಮರೆತು ಹೋಗಿದ್ದರು. ಇದನ್ನು ನಿರ್ವಾಹಕ ಪ್ರಶಾಂತ್ ಕಟಗೇರಿ (Athani bus conductor) ಗಮನಿಸಿ, ಘಟಕದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಘಟಕದ ವ್ಯವಸ್ಥಾಪಕ ಅಧಿಕಾರಿಗಳ ಸಮ್ಮುಖದಲ್ಲಿ ಬಂಗಾರದ ಆಭರಣ ಕಳೆದುಕೊಂಡ ಮಹಿಳೆಯನ್ನು ಅಥಣಿ ಘಟಕಕ್ಕೆ ಇಂದು ಕರೆಯಿಸಿ ಪ್ರಶಾಂತ್ ಕಟಗೇರಿ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಅಥಣಿ ಕೆಎಸ್​ಆರ್​ಟಿಸಿ ಘಟಕದ ಹಿರಿಯ ಅಧಿಕಾರಿಗಳಿಂದ ಪ್ರಶಾಂತ್ ಕಟಗೇರಿಗೆ ಅವರನ್ನು ಸನ್ಮಾನಿಸಲಾಯಿತು. ಕಂಡಕ್ಟರ್ ಕಾರ್ಯಕ್ಕೆ ಅಥಣಿ ಜನತೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details