ಕರ್ನಾಟಕ

karnataka

ಕುಟುಂಬ ರಾಜಕಾರಣ ಜೆಡಿಎಸ್​ನ ನಾಚಿಕೆಗೇಡಿನ ಕೆಲಸ: ಶೆಟ್ಟರ್​ ವಾಗ್ದಾಳಿ

By

Published : Apr 4, 2019, 5:51 PM IST

ಬೆಳಗಾವಿಯಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ವಿರುದ್ಧ ಮಾಜಿ ಸಿಎಂ‌ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು

ಕಾಂಗ್ರೆಸ್​ ಹಾಗೂ ಜೆಡಿಎಸ್​ ವಿರುದ್ಧ ಮಾಜಿ ಸಿಎಂ‌ ಜಗದೀಶ ಶೆಟ್ಟರ್ ವಾಗ್ದಾಳಿ

ಬೆಳಗಾವಿ: ಜೆಡಿಎಸ್ ಈಗ ಅಪ್ಪ,ಮಕ್ಕಳ ಪಕ್ಷವಾಗಿ ಉಳಿದಿಲ್ಲ. ಅದು ತಂದೆ, ಮಗ, ಮೊಮ್ಮಕ್ಕಳು, ಸೊಸೆಯಂದಿರ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಮಾಜಿ ಸಿಎಂ‌ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದೆ. ಹೀಗಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೂ ಇದು ಬೇಸರ ತರಿಸಿದೆ ಎಂದರು. ನಾಚಿಕೆಗೇಡಿನ ಕೆಲಸ ಆ ಪಕ್ಷದಿಂದ ಆಗುತ್ತಿದೆ ಎಂದು ಕುಟುಕಿದರು.

ಕಾಂಗ್ರೆಸ್​ ಹಾಗೂ ಜೆಡಿಎಸ್​ ವಿರುದ್ಧ ಮಾಜಿ ಸಿಎಂ‌ ಜಗದೀಶ ಶೆಟ್ಟರ್ ವಾಗ್ದಾಳಿ

ಕಾಂಗ್ರೆಸ್​ಗೆ ಅವನತಿಯ ಭಯ ಎದುರಾಗಿದೆ. ರಾಹುಲ್ ಗಾಂಧಿ ಸೋಲಿನ‌ ಭೀತಿಯಿಂದಲೇ ವಯನಾಡುಗೆ ವಲಸೆ ಹೋಗಿದ್ದಾರೆ. ಅಮೇಥಿಯಲ್ಲಿ ಸಚಿವೆ ಸ್ಮೃತಿ ಇರಾನಿ ಸ್ಪರ್ಧೆಯಿಂದ ರಾಹುಲ್ ಹೆದರಿದ್ದಾರೆ. ಹಿಂದೂಗಳು ಕಾಂಗ್ರೆಸ್​ಗೆ ಮತ ಹಾಕಲ್ಲ ಎಂಬುದನ್ನು ಅರಿತು ಮುಸ್ಲಿಂ, ಕ್ರಿಶ್ಚಿಯನ್‌ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಯಾನಾಡನ್ನು ರಾಹುಲ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಅಮೇಥಿ ಹಾಗೂ ವಯನಾಡು ಎರಡೂ ಕಡೆ ರಾಹುಲ್​ಗೆ ಸೋಲು ಖಚಿತ. ಲೋಕಸಭೆ ಫಲಿತಾಂಶ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಮೂರಾಬಟ್ಟಿಯಾಗಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲ್ಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

sample description

TAGGED:

ABOUT THE AUTHOR

...view details