ಕರ್ನಾಟಕ

karnataka

SBI Notification 2022: ಎಸ್​​​ಬಿಐ ಬ್ಯಾಂಕ್​​ನಲ್ಲಿ 1673 ಹುದ್ದೆಗಳಿಗೆ ಅರ್ಜಿ ಆಹ್ವಾನ

By

Published : Sep 22, 2022, 1:05 PM IST

SBI Notification 2022

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಕ್ಲರ್ಕ್​ ಹುದ್ದೆಗಳಿಗೋಸ್ಕರ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನವದೆಹಲಿ:ದೇಶದ ಅಗ್ರಗಣ್ಯ ಬ್ಯಾಂಕ್​​​ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೋಸ್ಕರ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಬ್ಯಾಂಕ್​​ನ ಅಧಿಕೃತ ವೆಬ್​ಸೈಟ್ sbi.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

ಎಸ್​​ಬಿಐ ಬ್ಯಾಂಕ್​​ನಲ್ಲಿ ಕ್ಲರ್ಕ್​ ಹುದ್ದೆಗಳಿಗೋಸ್ಕರ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 1673 ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ದಿನಾಂಕ, ಅರ್ಜಿ ನಮೂನೆ, ಅಧಿಸೂಚನೆ, ಅರ್ಹತೆ ಮತ್ತು ಇತರ ವಿವರಗಳನ್ನು ವೆಬ್​​ಸೈಟ್​ ಮೂಲಕ ಪಡೆದುಕೊಳ್ಳಬಹುದು.

ಪದವೀಧರ ವಿದ್ಯಾರ್ಥಿಗಳು ಅಕ್ಟೋಬರ್ 2022ರ​ 12ರೊಳಗೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್​​ 17, 18, 19 ಮತ್ತು 20ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ.

ಎಸ್‌ಬಿಐ ಪಿಒ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಎಸ್‌ಬಿಐ ಪಿಒ ಮೇನ್ಸ್ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ವಯಸ್ಸು 30 ಅಥವಾ ಅದಕ್ಕಿಂತಲೂ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ 1673 ಹುದ್ದೆಗಳಲ್ಲಿ 648 ಸ್ಥಾನ ಕಾಯ್ದಿರಿಸಲಾಗಿದ್ದು, ಇನ್ನುಳಿದಂತೆ 464 OBC, 270 SC, 131 ST ಮತ್ತು 160 EWS ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಇದನ್ನೂ ಓದಿ:ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ಅರ್ಜಿ ಆಹ್ವಾನ... ತೃತೀಯ ಲಿಂಗಿಗಳಿಗೆ ಮೊದಲ ಬಾರಿ ಮೀಸಲಾತಿ

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡುವಾಗ ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಜೊತೆಗೆ ನೋಂದಣಿ ಸಂಖ್ಯೆ ಹಾಗೂ ಪಾಸ್​ವರ್ಡ್ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಆನ್​ಲೈನ್​ ಮೂಲಕ 750 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.

ಅರ್ಜಿ ಸಲ್ಲಿಕೆ ಮಾಡುವ ವಿಧಾನ:

  • ಎಸ್​​ಬಿಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (sbi-co.in ಅಥವಾ ibpsonline.ibps.in)
  • ಪುಟದಲ್ಲಿರುವ SBI ಕ್ಲರ್ಕ್​ ಅರ್ಜಿ ಲಿಂಕ್​ ಕ್ಲಿಕ್ ಮಾಡಿ
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ನಮೂನೆ ಭರ್ತಿ ನಂತರ ಮಾಹಿತಿ ಪರಿಶೀಲನೆ, ಅಗತ್ಯ ಬದಲಾವಣೆಗಳಿದ್ದರೆ ಮಾಡುವುದು
  • ಅರ್ಜಿ ಸಲ್ಲಿಕೆ ಬಟನ್ ಕ್ಲಿಕ್ ಮಾಡಿ, ಶುಲ್ಕ ಪಾವತಿ
  • ನೋಂದಾಯಿತ ಸಂಖ್ಯೆಯ ದೃಢೀಕರಣ ಸಂದೇಶ ಮೇಲ್​ ಮೂಲಕ ಸ್ವೀಕಾರ.

ABOUT THE AUTHOR

...view details