ಕರ್ನಾಟಕ

karnataka

ಎರಡನೇ ಬಾರಿಗೆ ದಾಖಲೆಯ 1.72 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ಕರ್ನಾಟಕದಿಂದ ಎಷ್ಟು ಕಲೆಕ್ಷನ್​​ ಗೊತ್ತಾ?​

By ETV Bharat Karnataka Team

Published : Nov 1, 2023, 6:12 PM IST

Updated : Nov 1, 2023, 6:44 PM IST

GST collections rise: ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. ಅಕ್ಟೋಬರ್​ ತಿಂಗಳಲ್ಲಿ ಒಟ್ಟು 1.72 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಿದೆ.

Etv Bharat
Etv Bharat

ನವದೆಹಲಿ:ಅಕ್ಟೋಬರ್​ ತಿಂಗಳಲ್ಲಿ ಒಟ್ಟು 1.72 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) (GST Revenue Collection) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ತಿಳಿಸಿದೆ. ಕಳೆದ ವರ್ಷ ಇದೇ ಅಕ್ಟೋಬರ್​ ತಿಂಗಳ ಜಿಎಸ್​ಟಿ ಆದಾಯಕ್ಕೆ ಹೋಲಿಸಿದರೆ, ಈ ಬಾರಿ ಶೇ.13ರಷ್ಟು ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಹೇಳಿದೆ.

ಅಕ್ಟೋಬರ್​ನಲ್ಲಿ ಒಟ್ಟಾರೆ 1,72,003 ಕೋಟಿ ರೂ. ಜಿಎಸ್​ಟಿ ಆದಾಯ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್​ಟಿ (CGST) 30,062 ಕೋಟಿ ರೂ. ಮತ್ತು ರಾಜ್ಯ ಜಿಎಸ್​ಟಿ (SGST) 38,171 ಕೋಟಿ ರೂ. ಹಾಗೂ ಸಮಗ್ರ ಜಿಎಸ್​ಟಿ (IGST) 91,315 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,127 ಕೋಟಿ ರೂ.) ಸೇರಿದೆ. ಜೊತೆಗೆ ಸೆಸ್ ರೂಪದಲ್ಲಿ 12,456 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,294 ಕೋಟಿ ರೂ.ಸೇರಿ) ಆದಾಯ ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

ಸಮಗ್ರ ಜಿಎಸ್​ಟಿಯಲ್ಲಿ ಸರ್ಕಾರವು ಕೇಂದ್ರ ಜಿಎಸ್‌ಟಿಗೆ 42,873 ಕೋಟಿ ರೂ. ಹಾಗೂ ರಾಜ್ಯ ಜಿಎಸ್​ಟಿಗೆ 36,614 ಕೋಟಿ ರೂ.ಗಳನ್ನು ಸೆಟ್ಲ್‌ಮೆಂಟ್​ ಮಾಡಿದೆ. ಸಾಮಾನ್ಯ ಹಂಚಿಕೆ ನಂತರ ಅಕ್ಟೋಬರ್​ ತಿಂಗಳ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಕೇಂದ್ರ ಜಿಎಸ್‌ಟಿಗೆ 72,934 ಕೋಟಿ ರೂ. ಮತ್ತು ರಾಜ್ಯ ಜಿಎಸ್​ಟಿಗೆ 74,785 ಕೋಟಿ ರೂ. ಆಗಿದೆ ಎಂದು ಅಂಕಿ-ಅಂಶಗಳು ವಿವರಿಸಿವೆ.

2023ರ ಅಕ್ಟೋಬರ್​ ತಿಂಗಳ ಒಟ್ಟು ಜಿಎಸ್​ಟಿ ಆದಾಯವು ಕಳೆದ ವರ್ಷ ಎಂದರೆ 2022ರ ಅದೇ ತಿಂಗಳಿಗಿಂತ ಶೇ.13ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ಈ ತಿಂಗಳಿನಲ್ಲಿ ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿ) ಸಂಗ್ರಹಿಸಿದ ಆದಾಯವು ಕಳೆದ ವರ್ಷಕ್ಕಿಂತ ಶೇ.13ರಷ್ಟು ಅಧಿಕವಾಗಿದೆ. 2023-24ನೇ ಆರ್ಥಿಕ ಸಾಲಿನಲ್ಲಿ ಸರಾಸರಿ ಒಟ್ಟು ಮಾಸಿಕ ಜಿಎಸ್​ಟಿ ಸಂಗ್ರಹವು ಈಗ 1.66 ಲಕ್ಷ ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಗಿಂತ ಶೇ.11ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಎರಡನೇ ಬಾರಿ ದಾಖಲೆಯ ಆದಾಯ ಸಂಗ್ರಹ:ಅಕ್ಟೋಬರ್​ ತಿಂಗಳಜಿಎಸ್‌ಟಿ ಆದಾಯ ಸಂಗ್ರಹವು ದಾಖಲೆ ಬರೆದಿದೆ. ಇದುವರೆಗೆ ಎರಡನೇ ಬಾರಿಗೆ ಅತ್ಯಧಿಕ ಆದಾಯ ಸಂಗ್ರಹವಾಗಿದೆ. ಇದೇ ವರ್ಷದ ಏಪ್ರಿಲ್​ ತಿಂಗಳಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಈ ತಿಂಗಳು 1.72 ಲಕ್ಷ ಕೋಟಿ ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ ಇದು 1.63 ಲಕ್ಷ ಕೋಟಿ ರೂ. ರೂಪಾಯಿಗಳಷ್ಟಿತ್ತು.

ಕರ್ನಾಟಕದಿಂದ 23,400 ಕೋಟಿ ಸಂಗ್ರಹ:ದೇಶದ ಅತಿ ಹೆಚ್ಚು ಜಿಎಸ್​ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಈ ಬಾರಿ 23,400 ಕೋಟಿ ರೂ. ಜಿಎಸ್​ಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಯ ಆದಾಯವು 20,165 ಕೋಟಿ ರೂ. ಆಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಶೇ.16ರಷ್ಟು ಆದಾಯ ಸಂಗ್ರಹ ಏರಿಕೆಯಾಗಿದೆ. ಸೆಟ್ಲ್‌ಮೆಂಟ್​ ನಂತರ ಕರ್ನಾಟಕದ 42,657 ಕೋಟಿ ರೂ. ಜಿಎಸ್​ಟಿ ಆದಾಯ ಆಗಿದ್ದು, ಕಳೆದ ಸಲ 37,924 ಕೋಟಿ ರೂ. ಆಗಿತ್ತು. ಇದರಲ್ಲಿ ಶೇ.12ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ:ರಾಜ್ಯದ 2,333 ಕೋಟಿ ರೂ. ಬಾಕಿ ಜಿಎಸ್​​​ಟಿ ಪರಿಹಾರ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರ ಸೂಚನೆ

Last Updated : Nov 1, 2023, 6:44 PM IST

ABOUT THE AUTHOR

...view details