ಕರ್ನಾಟಕ

karnataka

ಭಾರತೀಯ ಚಿನಿವಾರ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ..

By

Published : Sep 3, 2022, 9:50 AM IST

ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ಭಾರತೀಯ ಚಿನ್ನದ ದರ

ಭಾರತೀಯ ಚಿನಿವಾರ ಮಾರುಕಟ್ಟೆಯು ಗುರುವಾರದ ಆಭರಣದ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆ ಏರಿಕೆಯಾಗಿದೆ. 24k​ ಶುದ್ಧತೆಯ ಹತ್ತು ಗ್ರಾಂ ಚಿನ್ನ 50,730 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿ 52,500 ರೂ. ಇದೆ.

ಮುಂಬೈ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,390 ರೂಪಾಯಿ ಮತ್ತು 24 ಕ್ಯಾರೆಟ್​ 50,610 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್​ ಚಿನ್ನ 46,940 ರೂ. ಹಾಗೂ 24k ಕ್ಯಾರೆಟ್​ ಚಿನ್ನ 51,210 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,540 ರೂಪಾಯಿ ಮತ್ತು 24 ಕ್ಯಾರೆಟ್​ 50,770 ಇದೆ.

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 52,500 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 58,000 ರೂಪಾಯಿ ಇದೆ.

ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ?

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ (1 ಗ್ರಾಂ)
ಬೆಂಗಳೂರು 4,640 5,066 58.00
ಹುಬ್ಬಳ್ಳಿ 4,640 5,066 58.00
ಮೈಸೂರು 4,640 5,194 54.00
ಶಿವಮೊಗ್ಗ 4,625 5,037 53.50
ಮಂಗಳೂರು 4,645 5,067 58.00
ದಾವಣಗೆರೆ 4,820 5,061 60.18

ABOUT THE AUTHOR

...view details