ಕರ್ನಾಟಕ

karnataka

ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್​ ಕಾಯಿನ್​; 2 ವರ್ಷಗಳಲ್ಲೇ ಗರಿಷ್ಠ

By ETV Bharat Karnataka Team

Published : Sep 20, 2023, 6:57 PM IST

Updated : Sep 20, 2023, 7:03 PM IST

ಕಳೆದ ಒಂದು ವಾರದ ಅವಧಿಯಲ್ಲಿ ಬಿಟ್​ ಕಾಯಿನ್ ವಹಿವಾಟಿನಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

Bitcoin logs over 700K transactions in single day after almost 2 years: Data
Bitcoin logs over 700K transactions in single day after almost 2 years: Data

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಕಳೆದ ಒಂದು ವಾರದ ಅವಧಿಯಲ್ಲಿ ಬಿಟ್ ಕಾಯಿನ್ ವಹಿವಾಟು ಅಸಾಧಾರಣ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 7,00,000 ಕ್ಕೂ ಹೆಚ್ಚು ವಹಿವಾಟುಗಳನ್ನು ದಾಖಲಿಸಿದೆ ಎಂದು ಹೊಸ ಅಂಕಿ ಅಂಶಗಳು ತೋರಿಸಿವೆ. ವಿಶ್ಲೇಷಣಾ ಸಂಸ್ಥೆ ಇನ್ ಟು ದಿ ಬ್ಲಾಕ್ ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, ವರದಿಯಾದ ಬಿಟ್ ಕಾಯಿನ್ ವಹಿವಾಟುಗಳ ಸಂಖ್ಯೆ ಸುಮಾರು 7,03,000 ಕ್ಕೆ ಏರಿದೆ. ಇದು 2023 ರಲ್ಲಿ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯ ವಹಿವಾಟು ಆಗಿದೆ. ಅಲ್ಲದೆ ಸುಮಾರು ಎರಡು ವರ್ಷಗಳಲ್ಲಿ ಕಂಡುಬಂದ ಅತ್ಯಧಿಕ ಬಿಟ್​ ಕಾಯಿನ್ ವಹಿವಾಟು ಇದಾಗಿದೆ.

"ಐತಿಹಾಸಿಕ ಮೈಲಿಗಲ್ಲು: ಬಿಟ್ ಕಾಯಿನ್ ಶುಕ್ರವಾರ ದಾಖಲೆಯ 703 ಸಾವಿರ ವಹಿವಾಟುಗಳನ್ನು ನಡೆಸಿದೆ." ಎಂದು ಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಇದಲ್ಲದೆ ಬಿಟ್​ ಕಾಯಿನ್​ನಲ್ಲಿ ದೈನಂದಿನ ಸಕ್ರಿಯ ಖಾತೆಗಳ ಸಂಖ್ಯೆಯೂ ಹೆಚ್ಚಾಗಿದೆ. ಬಿಟ್​ ಇನ್ಫೊ ಚಾರ್ಟ್​ ಮಾಹಿತಿಯ ಪ್ರಕಾರ, ದೈನಂದಿನ ಸಕ್ರಿಯ ಖಾತೆಗಳ ಸಂಖ್ಯೆ ಸೆಪ್ಟೆಂಬರ್ 15 ರಂದು ಬಹು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಎರಡು ವರ್ಷಗಳ ಹಿಂದೆ ಇದ್ದ 7,54,000 ರಿಂದ 1.08 ಮಿಲಿಯನ್​ಗೆ ಏರಿದೆ. ಇದಕ್ಕೂ ಒಂದು ದಿನ ಮೊದಲು ದೈನಂದಿನ ಸಕ್ರಿಯ ಖಾತೆಗಳ ವಿಷಯದಲ್ಲಿ ಎಥೆರಿಯಮ್ ಬಿಟ್ ಕಾಯಿನ್ ಅನ್ನು ಮೀರಿಸಿತ್ತು.

ಬಿಟ್​ ಕಾಯಿನ್ ಏಪ್ರಿಲ್ 18 ರಂದು 30,400 ಡಾಲರ್​ಗೆ ಏರಿಕೆಯಾಗಿ ಜೂನ್ ಆರಂಭದಿಂದ ಗರಿಷ್ಠ ಮಟ್ಟವನ್ನು ತಲುಪಿದ್ದರೂ, ಅದರ ಮಾಸಿಕ ಲಾಭವು ಕೇವಲ 3 ಪ್ರತಿಶತದಷ್ಟಿದೆ. ಇದು ಮಾರ್ಚ್​ನಲ್ಲಿ ಶೇಕಡಾ 21 ಕ್ಕೆ ಇಳಿದಿದೆ ಮತ್ತು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಲಾಭಕ್ಕಿಂತ ಕಡಿಮೆಯಾಗಿದೆ ಎಂದು ಬಿಟ್​ ಕಾಯಿನ್ ಕ್ಯಾಸಿನೋಸ್​ ಡಾಟ್ ಕಾಂ ಅಂಕಿ ಅಂಶಗಳು ತಿಳಿಸಿವೆ.

ಬಿಟ್​ ಕಾಯಿನ್ ಅಥವಾ ಬಿಟಿಸಿ ಇದೊಂದು ಕ್ರಿಪ್ಟೋಕರೆನ್ಸಿಯಾಗಿದ್ದು, ಯಾವುದೇ ಒಬ್ಬ ವ್ಯಕ್ತಿ, ಗುಂಪು ಅಥವಾ ಘಟಕದ ನಿಯಂತ್ರಣದ ಹೊರಗೆ ಹಣದ ರೂಪದಲ್ಲಿ ಮತ್ತು ಪಾವತಿಯ ರೂಪದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ವರ್ಚುವಲ್ ಕರೆನ್ಸಿಯಾಗಿದೆ. ಬಿಟ್ ಕಾಯಿನ್ ಅನ್ನು 2009 ರಲ್ಲಿ ಅನಾಮಧೇಯ ಡೆವಲಪರ್ ಅಥವಾ ಡೆವಲಪರ್ ಗಳ ಗುಂಪು ಸಟೋಶಿ ನಕಾಮೊಟೊ ಎಂಬ ಹೆಸರಿನಲ್ಲಿ ಜಗತ್ತಿಗೆ ಪರಿಚಯಿಸಿತು. ಅಂದಿನಿಂದ ಇದು ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರೆನ್ಸಿಯಾಗಿದೆ.

ಸರ್ಕಾರಿ ಕರೆನ್ಸಿಗಿಂತ ಭಿನ್ನವಾಗಿ, ಬಿಟ್ ಕಾಯಿನ್ ಅನ್ನು ಬ್ಲಾಕ್ ಚೈನ್ ಎಂದು ಕರೆಯಲ್ಪಡುವ ವಿಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆಯನ್ನು ಬಳಸಿಕೊಂಡು ರಚಿಸಲಾಗುತ್ತದೆ, ವಿತರಿಸಲಾಗುತ್ತದೆ, ವ್ಯಾಪಾರ ಮಾಡಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ : ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ; ಕೆನಡಾ ಪರ ನಿಂತ ಪಾಕಿಸ್ತಾನ ಮಾಜಿ ವಿದೇಶಾಂಗ ಮಂತ್ರಿ ಬಿಲಾವಲ್

Last Updated : Sep 20, 2023, 7:03 PM IST

ABOUT THE AUTHOR

...view details