ನವದೆಹಲಿ:ಚೀನಾದಲ್ಲಿ ಹಬ್ಬಿರುವ ಮಹಾಮಾರಿ ಕೊರೊನಾ ವೈರಾಣುನಿಂದಾಗಿ ಜಾಗತಿಕ ಬೆಳವಣಿಗೆ ಕುಸಿತಗೊಂಡು ಬೇಡಿಕೆ ಸಹ ಕ್ಷೀಣಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ವಾರದಿಂದ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿದೆ.
ಕೊರೊನಾ ಸೋಂಕಿಗೆ ಕರಗಿದ ಇಂಧನ ದರ... 1.47 ರೂ. ಕುಸಿದ ಡೀಸೆಲ್... ಪೆಟ್ರೋಲ್ ದರವೆಷ್ಟು ಗೊತ್ತೆ?
ಬ್ರೆಂಟ್ ಕಚ್ಚಾ ತೈಲ ದರ ಇಳಿಕೆಯ ತತ್ಪರಿಣಾಮ ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸತತ 6 ದಿನಗವೂ ಇಳಿಕೆ ಕಂಡಿದೆ. ಈ ಆರು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 1.22 ಹಾಗೂ ₹ 1.47ಯಷ್ಟು ಇಳಿಕೆಯಾದಂತಾಗಿದೆ. ಇಂದು (ಮಂಗಳವಾರ) ಕೂಡ ಅನುಕ್ರಮವಾಗಿ 11 ಪೈಸೆ ಹಾಗೂ 13 ಪೈಸೆಯಷ್ಟ ತಗ್ಗಿದೆ.
ಬ್ರೆಂಟ್ ಕಚ್ಚಾ ತೈಲ ದರ ಇಳಿಕೆಯ ತತ್ಪರಿಣಾಮ ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸತತ 6 ದಿನಗಳೂ ಕ್ಷೀಣಿಸಿದೆ. ಈ ಆರು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 1.22 ಹಾಗೂ ₹ 1.47ಯಷ್ಟು ಇಳಿಕೆಯಾದಂತಾಗಿದೆ. ಇಂದು (ಮಂಗಳವಾರ) ಕೂಡ ಅನುಕ್ರಮವಾಗಿ 11 ಪೈಸೆ ಹಾಗೂ 13 ಪೈಸೆಯಷ್ಟ ತಗ್ಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ₹ 73.60 ಹಾಗೂ ಡೀಸೆಲ್ ₹ 66.58 ದರದಲ್ಲಿ ಮಾರಾಟ ಆಗುತ್ತಿದೆ. ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಗುರುಗ್ರಾಮ್ನಲ್ಲಿ ಕ್ರಮವಾಗಿ ₹ 79.21 & ₹ 69.79, ₹ 76.06 & ₹ 68.79, ₹76.44 & ₹ 70.33, ₹78.26 & ₹72.60 ಹಾಗೂ ₹ 73.35 & ₹ 65.77 ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.